ಕುಶಾಲನಗರ, ಜು. 30: ಕುಶಾಲನಗರ ಬೈಚನಹಳ್ಳಿಯ ಸರ್ವೆ ನಂ 164/1 ರಲ್ಲಿ ಅಗತ್ಯ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ವಿವಾದಿತ ಬಡಾವಣೆಯ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಕಿಂಚಿತ್ತೂ ಸ್ಪಂದನೆ ತೋರಿಲ್ಲ ಎಂದು ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ಆರೋಪಿಸಿದ್ದಾರೆ.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ಅನುಮೋದನೆ ಪಡೆಯದೆ ಬಡಾವಣೆಗೆ ಖಾತೆ ಮಾಡಿಕೊಟ್ಟಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ತಾ. 31 ರಂದು (ಇಂದು) ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ.ಪಂ. ಸದಸ್ಯರಾದ ಪ್ರಮೋದ್ ಮುತ್ತಪ್ಪ, ಎಂ.ಬಿ. ಸುರೇಶ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮತ್ತು ವೆಂಕಟೇಶ್ ಪೂಜಾರಿ, ಶಬ್ಬೀರ್ ಇದ್ದರು.