ಕುಶಾಲನಗರ, ಜು. 30: ಪ್ರತಿಯೊಬ್ಬರೂ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಲಯನ್ಸ್ 317ಡಿ ಜಿಲ್ಲೆಯ ಸಂಯೋಜಕರಾದ ಪೊನ್ನಚ್ಚನ ಮೋಹನ್ ಕರೆ ನೀಡಿದ್ದಾರೆ. ಅವರು ಕುಶಾಲನಗರ ಲಯನ್ಸ್ ಕ್ಲಬ್ 2020-21 ರ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಅಗತ್ಯವುಳ್ಳ ಜನರಿಗೆ ಸಹಾಯಹಸ್ತ ನೀಡುವುದು ಲಯನ್ಸ್ ಕ್ಲಬ್ ಗುರಿಯಾಗಿದೆ. ಇತರರಿಗೆ ಸಹಾಯಹಸ್ತ ಕಲ್ಪಿಸುವ ಮೂಲಕ ಸ್ವಯಂ ತೃಪ್ತಿ ಗಳಿಕೆ ಸಾಧ್ಯ ಎಂದು ಹೇಳಿದರು.

2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾನೆಹಿತ್ಲು ಸತೀಶ್‍ಕುಮಾರ್ ಅವರ ತಂಡಕ್ಕೆ ಪ್ರಮಾಣವಚನ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂತೀಯ ಅಧ್ಯಕ್ಷರಾದ ಜಗದೀಶ್ ಅವರು ಮಾತನಾಡಿ, ಉತ್ತಮ ಕಾರ್ಯಯೋಜನೆಗಳನ್ನು ರೂಪಿಸಿ ಕೊಂಡು ವಿಶ್ವದ ಎಲ್ಲೆಡೆ ಸಮಾಜದ ಅಭಿವೃದ್ಧಿಯಲ್ಲಿ ಲಯನ್ಸ್ ಕ್ಲಬ್ ತನ್ನನ್ನು ತೊಡಗಿಸಿಕೊಂಡಿದೆ. ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗ ಬೇಕು ಎಂದು ಹೇಳಿದರು.

ನಿರ್ಗಮಿತ ಅಧ್ಯಕ್ಷರಾದ ಕೊಡಗನ ಹರ್ಷ ತಮ್ಮ ಅಧಿಕಾರಾವಧಿಯಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಂಸ್ಥೆಯ ಪ್ರಮುಖರಾದ ಕವಿತ ಮೋಹನ್ ಕಳೆದ ಸಾಲಿನ ವರದಿ ವಾಚಿಸಿದರು. ಖಜಾಂಚಿ ಪವನ್‍ಕುಮಾರ್ ಹಣಕಾಸು ವರದಿ ನೀಡಿದರು. ವಲಯ ಅಧ್ಯಕ್ಷರಾದ ಎಂ.ವಿ.ಶಶಿಕುಮಾರ್ ನೂತನ ತಂಡದ ಸದಸ್ಯರಿಗೆ ಶುಭ ಹಾರೈಸಿದರು.

ನೂತನ ಸಾಲಿನ ಅಧ್ಯಕ್ಷರಾಗಿ ಕಾನೆಹಿತ್ಲು ಸತೀಶ್‍ಕುಮಾರ್ ಅವರ ತಂಡದಲ್ಲಿ ಕಾರ್ಯದರ್ಶಿಯಾಗಿ ಸುನಿಲ್ ಬೊಂಬಾರೆ, ಖಜಾಂಚಿಯಾಗಿ ಸುಮನ್, ವಿವಿಧ ಘಟಕಗಳ ಪ್ರಮುಖರಾಗಿ ವಿವೇಕ್, ರಾಜಶೇಖರ್, ಡಾ.ಪ್ರವೀಣ್, ಹೇಮಂತ್, ದಯಾನಂದ್, ಎಚ್.ಎಂ.ಗಣೇಶ್, ನಾಗರಾಜ್, ರಾಜೇಶ್, ಪವನ್‍ಕುಮಾರ್, ಶಶಿಕುಮಾರ್, ಎಂ.ಎಸ್.ಚಿಣ್ಣಪ್ಪ ನೇಮಕಗೊಂಡಿದ್ದಾರೆ.

ಸಂಸ್ಥೆಯ ಹಿರಿಯ ಸದಸ್ಯರಾದ ವೀರಪ್ಪ, ಮಹಿಳಾ ಸದಸ್ಯರಾದ ಪ್ರಿಯದರ್ಶಿನಿ, ಸುಮಿತ್ರ ಮತ್ತಿತರರು ಇದ್ದರು.