ಪೆÇನ್ನಂಪೇಟೆ, ಜು. 29: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಟಿಂಬರ್ ಸಾಗಾಟಕ್ಕೆ ಜಿಲ್ಲಾಡಳಿತ ಹೇರಿರುವ ನಿಬರ್ಂಧವನ್ನು ನಿಗದಿತ ಅವಧಿಗಿಂತ ಮುಂದೆ ವಿಸ್ತರಿಸಬಾರದು. ಈಗಾಗಲೇ ಭಾರಿ ನಷ್ಟ ಅನುಭವಿಸಿರುವ ಟಿಂಬರ್ ಕ್ಷೇತ್ರದ ವ್ಯವಹಾರದಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಕೊಡಗು ಟಿಂಬರ್ ವ್ಯಾಪಾರಿಗಳ ಮತ್ತು ಟಿಂಬರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಎಂ.ಎ. ಸಮೀರ್ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಳೆದ 4 ತಿಂಗಳಿನಿಂದ ಕೋವಿಡ್-19ರ ತಲ್ಲಣದಿಂದ ಟಿಂಬರ್ ಕ್ಷೇತ್ರ ಭಾರಿ ನಷ್ಟ ಅನುಭವಿಸಿದೆ. ಇದೀಗ ಜಿಲ್ಲಾಡಳಿತ ಮಳೆಗಾಲದಲ್ಲಿ ಜಿಲ್ಲೆಯಿಂದ ಟಿಂಬರ್ ಸಾಗಿಸುವುದನ್ನು ಆಗಸ್ಟ್ 8ರವರೆಗೆ ನಿಷೇಧಿಸಿದೆ. ಇದು ಮತ್ತೊಂದು ರೀತಿಯಲ್ಲಿ ನಷ್ಟ ಅನುಭವಿಸು ವಂತಾಗಿದೆ. ಆದರೆ ಈಗಾಗಲೇ ಜಿಲ್ಲಾಡಳಿತ ನಿಗದಿಪಡಿಸಿರುವ ದಿನಾಂಕದ ನಂತರ ಯಾವುದೇ ಕಾರಣಕ್ಕೂ ನಿಬರ್ಂಧವನ್ನು ವಿಸ್ತರಿಸಬಾರದು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಸರಕಾರದ ಅನುಮತಿ ಪಡೆದು ನಡೆಸುವ ಟಿಂಬರ್ ವ್ಯವಹಾರ ಸರಕಾರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುವ ಪ್ರಮುಖ ಮೂಲವಾಗಿದೆ. ಈ ನಿಬರ್ಂಧದಿಂದಾಗಿ ಕೊಡಗಿನ ಸಾಮಾನ್ಯ ರೈತರ ಮತ್ತೊಂದು ಆದಾಯದ ಮೂಲವಾಗಿರುವ ಸಿಲ್ವರ್ ಮರಗಳ ಸಾಗಾಟ ಕೂಡ ಇದೀಗ ಸಾಧ್ಯವಾಗುತ್ತಿಲ್ಲ. ಹಲವಾರು ರೈತರು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ತೋಟದಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಇದನ್ನು ಕಳೆದ ನಾಲ್ಕು ತಿಂಗಳಿಂದ ಸಾಗಾಟ ಮಾಡಲು ಸಾಧ್ಯವಾಗದೆ ತೋಟದಲ್ಲಿ ಬಿದ್ದಿದೆ. ಇದರಿಂದಾಗಿ ಮಾರಾಟ ಮಾಡಿದ ರೈತರು ಮತ್ತು ಖರೀದಿಸಿದ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ಕಾರಣದಿಂದ ವ್ಯಾಪಾರಿಗಳಿಗಿಂತ ರೈತರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಸಮೀರ್ ಅವರು ಒತ್ತಾಯಿಸಿದ್ದಾರೆ.