ಗೋಣಿಕೊಪ್ಪಲು, ಜು. 29: ತಿತಿಮತಿ ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಪಂಕಜ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ನೀಡಿದ್ದಾರೆ.

ರೂ.20 ಲಕ್ಷ ಅನುದಾನಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದು (ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ) ಕೆಲಸದ ಆದೇಶವನ್ನು ಸಹ ನೀಡಲಾಗಿರುತ್ತದೆ. ಈ ಸಂಬಂಧ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ವಿಚಾರಿಸಲಾಗಿ ಟೆಂಡರ್ ಆಗಿದ್ದು ಗುತ್ತಿಗೆದಾರರು ಕೂಡಲೇ ಕಾಮಗಾರಿ ಆರಂಭಿಸುವಂತೆ ತಿಳಿಸಲಾಗಿದೆ. ಅದಲ್ಲದೆ ಇದು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಅನುದಾನ ಆಗಿರುವುದಿಲ್ಲ. ಬದಲಿಗೆ ಪ್ರವಾಹ ಪರಿಹಾರ ನಿಧಿಯಿಂದ ಕೈಗೊಳ್ಳುತ್ತಿರುವ ಕಾಮಗಾರಿ ಇದಾಗಿರುತ್ತದೆ.

ಈ ಸಂಬಂಧ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಿ.ಆರ್.ಇ.ಡಿ. ಇವರು ಉಲ್ಲೇಖ(2)ರಲ್ಲಿ ಪತ್ರ ಬರೆಯಲಾಗಿದೆ. ಗಿರಿಜನ ಹಾಡಿಗಳ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಖರೀದಿಸಿ ಟಾರ್ಪಾಲ್ ವಿತರಿಸಲಾಗಿರುತ್ತದೆ. ಹನ್ನೆರಡು ಜನರಿಗೆ ಮನೆ ನಿರ್ಮಾಣ ಕಾಮಗಾರಿ ಸಂಬಂಧ ಪಟ್ಟ ಕಾಮಗಾರಿಯನ್ನು ಬಿಲ್ಲು ಪಾವತಿಗಾಗಿ ಕಚೇರಿಗೆ ಸಲ್ಲಿಸಲಾಗಿರುತ್ತದೆ. ಸರ್ಕಾರದ ಆದೇಶದನ್ವಯ ಯಾವುದೇ ಬಿಲ್ಲುಗಳನ್ನು ಪಾವತಿಸಲು ಸಾಧ್ಯವಿಲ್ಲದ ಕಾರಣ ಸದರಿ ಮನೆಗಳ ಬಿಲ್ಲುಗಳ ಸಹ ಪಾವತಿಗೆ ಬಾಕಿ ಇರುತ್ತದೆ ಎಂದು ಫಲಾನುಭವಿಗಳಿಗೆ ಮಾಹಿತಿ ನೀಡಲಾಗಿದೆ.