ಶ್ರೀಮಂಗಲ, ಜು. 29: ಹಾತೂರು ಗ್ರಾಮದಲ್ಲಿ ಕಾಡಾನೆ ಹಿಂಡು ತೋಟ ಹಾಗೂ ಗದ್ದೆಗೆ ನುಗ್ಗಿ ಅಪಾರ ಹಾನಿ ಮಾಡಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಗ್ರಾಮದ ರೈತ ಕುಪ್ಪಂಡ ಮುದ್ದಪ್ಪ ಅವರ ತೋಟಕ್ಕೆ ನುಗ್ಗಿದ್ದ ಕಾಡಾನೆ ಹಿಂಡು ತೆಂಗಿನ ಮರವನ್ನು ಮುರಿದಿದೆ.
ಅಲ್ಲದೇ ಭತ್ತದ ನಾಟಿ ಮಾಡಲು ಹಾಕಿದ್ದ ಸಸಿ ಮಡಿಯ ಪೈರನ್ನು ತುಳಿದು ನಷ್ಟಮಾಡಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿರುವ ಮುದ್ದಪ್ಪ ಅವರು ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.