ಹೆಬ್ಬಾಲೆ, ಜು. 29 : ಅಕ್ರಮವಾಗಿ ಶ್ರೀಗಂಧದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಬಾಣಾವರ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.75 ಸಾವಿರ ಮೌಲ್ಯದ ಶ್ರೀಗಂಧ ಸಮೇತ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆ ಬಳಿಯ ದೊಡ್ಡಬ್ಬೂರು ಗ್ರಾಮದ ಎಚ್.ಆರ್. ಪ್ರಕಾಶ್ ಬಂಧಿತ ಆರೋಪಿಯಾಗಿದ್ದಾನೆ.

ಅಬ್ಬೂರುಕಟ್ಟೆ ಸಮೀಪದ ಮೀಸಲು ಅರಣ್ಯದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕೆತ್ತನೆ ಮಾಡಿ ನಾಟಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಅಬ್ಬೂರುಕಟ್ಟೆಯಿಂದ ಕೊಣನೂರಿಗೆ ತೆಗೆದುಕೊಂಡು ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ಬಾಣಾವರ ಶಾಖೆಯ ಉಪ ವಲಯ (ಮೊದಲ ಪುಟದಿಂದ) ಅರಣ್ಯಾಧಿಕಾರಿ ಪುನಿತ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಾರ್ಗದ ಮಧ್ಯೆ ಮರಿಯನಗರ ಎಂಬಲ್ಲಿ 5.5 ಕೆಜಿ ಶ್ರೀಗಂಧದೊಂದಿಗೆ ಪ್ರಕಾಶ್‍ನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಅಬ್ಬೂರುಕಟ್ಟೆಯ ಮಂಜು ಪರಾರಿಯಾಗಿದ್ದಾನೆ.

ಈ ಇಬ್ಬರ ವಿರುದ್ಧ ಅರಣ್ಯ ಮೊಕದ್ದಮೆ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ವರುಣ್ ರಾಜ್, ವನಪಾಲಕ ಕರುಂಬಯ್ಯ, ಅಂಥೋಣಿ ಪಾಲ್ಗೊಂಡಿದ್ದರು.