ಮಡಿಕೇರಿ, ಜು. 29: ನಗರದ ಶ್ರೀ ವಿಜಯ ವಿನಾಯಕ ದೇವಾಲಯದಿಂದ ಕಾಲೇಜಿಗೆ ತೆರಳುವ ಮಾರ್ಗದಲ್ಲಿರುವ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ. ಸರಕಾರಕ್ಕೆ ಸೇರಿರುವ ಜಾಗವನ್ನು ಕಡಿದು ಸಮತಟ್ಟು ಮಾಡಲಾಗಿದ್ದು, ಇಂದು ಅಪರಿಚಿತ ವ್ಯಕ್ತಿಯೊಬ್ಬರು ಅಲ್ಲಿದ್ದ ಮರಗಳನ್ನು ಕಡಿದು ಹಾಕಿದ್ದಾರೆ. ಈ ಬಗ್ಗೆ ಸುಳಿವು ಪಡೆದ ಅರಣ್ಯ ಇಲಾಖೆ ವ್ಯಕ್ತಿಯನ್ನು ವಿಚಾರಿಸಿ ತನಿಖೆ ಕೈಗೊಂಡಿದೆ.