ಸೋಮವಾರಪೇಟೆ, ಜು. 29: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 17 ಸಾವಿರ ದಂಡ ವಿಧಿಸಲಾಗಿದೆ.
ತಾಲೂಕಿನ ಮಾದಾಪುರದಿಂದ ಜಂಬೂರು ಮಾರ್ಗದಲ್ಲಿ ಪಿಕ್‍ಅಪ್(ಕೆ.ಎ.12 ಬಿ. 6448)ನಲ್ಲಿ ಅಕ್ರಮವಾಗಿ ಮರಳು ಸಾಗಾಟಗೊಳಿಸುತ್ತಿದ್ದ ಮಾದಾಪುರ ನಿವಾಸಿ ವಿಜಯ ಎಂಬವರ ಪುತ್ರ ಮಧು ಎಂಬಾತನನ್ನು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ವಶಕ್ಕೆ ಪಡೆದಿದ್ದಾರೆ.
ನಂತರ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದು, ಇಲಾಖೆಯಿಂದ ರೂ. 17 ಸಾವಿರ ದಂಡ ವಿಧಿಸಲಾಗಿದೆ.