ಶನಿವಾರಸಂತೆ, ಜು. 28: ಪಟ್ಟಣದ ನಾಡ ಕಚೇರಿಗೆ ಬರುವ ಜನರಿಗೆ ಕೊರೊನಾ ಪರೀಕ್ಷೆಯಾಗಲಿ, ಸ್ಯಾನಿಟೈಜರ್ ಸಿಂಪಡಣೆಯಾಗಲಿ ಇಲ್ಲವಾಗಿದ್ದು, ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೋಬಳಿಯಾದ್ಯಂತ ಇರುವ ಸರ್ಕಾರದ ವಿವಿಧ ಇಲಾಖಾ ಕಚೇರಿಗಳಿಗೆ ಬರುವ ಜನರಿಗೆ ಅಧಿಕಾರಿಗಳಿಗೆ ಕೊರೊನಾ ಪರೀಕ್ಷೆ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸುವ ನಿಯಮವಿದೆ. ಆದರೆ ಪಟ್ಟಣದ ನಾಡ ಕಚೇರಿಯಲ್ಲಿ ಯಾವ ಆದೇಶವೂ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಬೇಕೆಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ಪ್ರವೀಣ್, ಹೋಬಳಿ ಘÀಟಕದ ಅಧ್ಯಕ್ಷ ಆನಂದ್, ಇತರ ಕಾರ್ಯಕರ್ತರು ಆಗ್ರಹಿಸಿ ಮನವಿ ಮಾಡಿದ್ದಾರೆ.