ಮಡಿಕೇರಿ, ಜು. 28: ಭೌಗೋಳಿಕವಾಗಿ ವಿಭಿನ್ನವಾಗಿರುವ, ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿನ ಸಂಚಾರ ವ್ಯವಸ್ಥೆಗೆ ಬಹುತೇಕ ಮಂದಿ ಒಂದಲ್ಲಾ ರೀತಿಯಲ್ಲಿ ಖಾಸಗಿ ಬಸ್‍ಗಳನ್ನು ಅವಲಂಬಿತ ರಾಗಿರುವುದು ಗಮನಾರ್ಹ. ಇಂತಹ ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದ ಈ ತನಕವೂ ಖಾಸಗಿ ಬಸ್‍ಗಳ ಓಡಾಟ ಬಹುತೇಕ ಸ್ತಬ್ಧಗೊಂಡಂತಾಗಿದೆ. ಕೆಲವಾರು ದಿನಗಳ ಲಾಕ್‍ಡೌನ್ -ನಿರ್ಬಂಧ ಕಾಜ್ಞೆಯ ನಿಯಮದಿಂದ ಬಸ್‍ಗಳು ಓಡಾಟ ನಡೆಸಿಲ್ಲವಾದರೆ ಉಳಿದಂತೆ ಜನ ಸಂಚಾರವೇ ವಿರಳವಾಗಿ ರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ, ಡೀಸಲ್ ದರ ಏರಿಕೆ, ತೆರಿಗೆ ಪಾವತಿಯ ಸಂಕಷ್ಟ, ಅಧಿಕ ನಿರ್ವಹಣಾ ವೆಚ್ಚದಿಂದಾಗಿ ಖಾಸಗಿ ಬಸ್ ಮಾಲೀಕರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ, ಪ್ರಸ್ತುತ ಬಸ್ ಸಂಚಾರಕ್ಕೆ ಅವಕಾಶವಿದ್ದರೂ ಈ ಬಗ್ಗೆ ಆಸಕ್ತಿ ವಹಿಸಲು ಯಾರೂ ಮುಂದಾಗಲು ಸಾಧ್ಯವಾಗದಂತಹ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಇದರಿಂದ ಕೇವಲ ನಾಲ್ಕೈದು ಬಸ್‍ಗಳು ಮಾತ್ರ ಓಡಾಡುತ್ತಿವೆ.ಕೊಡಗಿನ ಮೂಲೆ ಮೂಲೆಗಳಿಗೆ ಖಾಸಗಿ ಬಸ್‍ಗಳೇ ಮೂಲಾಧಾರ ವಾಗಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ಓಡಿಸಲಾಗುತ್ತಿದೆ ಯಾದರೂ ಕೊಡಗಿನಂತಹ ಗ್ರಾಮೀಣ ಭಾಗದ ಜನತೆಗೆ ಹೆಚ್ಚು ಉಪಕಾರ ವಾಗುತ್ತಿದ್ದಂತಹ ಖಾಸಗಿ ಬಸ್‍ಗಳ ಸೇವೆ ಇಲ್ಲದೆ ಬಹುತೇಕ ಜನರು ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಸಮಸ್ಯೆಗಳನ್ನೇ ಎದುರಿಸಿಕೊಂಡು ಬರುವಂತಾಗಿದೆ.
ಪತ್ರಿಕೆಗಳ ಸಾಗಾಟ, ಹಾಲು, ಮತ್ತಿತರ ಕೆಲವಾರು ಪಾರ್ಸಲ್‍ಗಳು ಒಂದೆಡೆಯಿಂದ ಮತ್ತೊಂದೆಡೆಗೆ ನಂಬಿಕೆಗೆ ಅರ್ಹವಾಗಿ ಖಾಸಗಿ ಬಸ್‍ಗಳ ಸೇವಾ ಹಾಗೂ ಸಹಕಾರದ ಮನೋಭಾವದಲ್ಲಿ ಸಾಗಾಟವಾ ಗುತ್ತಿದ್ದವು. ನಿಗದಿತ ಸಮಯಗಳಲ್ಲಿ ಈ ಬಸ್‍ಗಳು ಸಂಚರಿಸುವುದು, ಚಾಲಕ, ನಿರ್ವಾಹಕ, ಕ್ಲೀನರ್‍ಗಳು ಅಲ್ಲಲ್ಲಿಗೆ ಪರಿಚಯಸ್ಥರಾಗಿರು ವದರಿಂದ ಪರಸ್ಪರ ಪ್ರೀತಿ - ವಿಶ್ವಾಸ ಕೊಡಗಿನ ಮೂಲೆ ಮೂಲೆಗಳಿಗೆ ಖಾಸಗಿ ಬಸ್‍ಗಳೇ ಮೂಲಾಧಾರ ವಾಗಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳನ್ನು ಓಡಿಸಲಾಗುತ್ತಿದೆ ಯಾದರೂ ಕೊಡಗಿನಂತಹ ಗ್ರಾಮೀಣ ಭಾಗದ ಜನತೆಗೆ ಹೆಚ್ಚು ಉಪಕಾರ ವಾಗುತ್ತಿದ್ದಂತಹ ಖಾಸಗಿ ಬಸ್‍ಗಳ ಸೇವೆ ಇಲ್ಲದೆ ಬಹುತೇಕ ಜನರು ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಸಮಸ್ಯೆಗಳನ್ನೇ ಎದುರಿಸಿಕೊಂಡು ಬರುವಂತಾಗಿದೆ.
ಪತ್ರಿಕೆಗಳ ಸಾಗಾಟ, ಹಾಲು, ಮತ್ತಿತರ ಕೆಲವಾರು ಪಾರ್ಸಲ್‍ಗಳು ಒಂದೆಡೆಯಿಂದ ಮತ್ತೊಂದೆಡೆಗೆ ನಂಬಿಕೆಗೆ ಅರ್ಹವಾಗಿ ಖಾಸಗಿ ಬಸ್‍ಗಳ ಸೇವಾ ಹಾಗೂ ಸಹಕಾರದ ಮನೋಭಾವದಲ್ಲಿ ಸಾಗಾಟವಾ ಗುತ್ತಿದ್ದವು. ನಿಗದಿತ ಸಮಯಗಳಲ್ಲಿ ಈ ಬಸ್‍ಗಳು ಸಂಚರಿಸುವುದು, ಚಾಲಕ, ನಿರ್ವಾಹಕ, ಕ್ಲೀನರ್‍ಗಳು ಅಲ್ಲಲ್ಲಿಗೆ ಪರಿಚಯಸ್ಥರಾಗಿರು ವದರಿಂದ ಪರಸ್ಪರ ಪ್ರೀತಿ - ವಿಶ್ವಾಸ ಮುಂದಾಗಿದ್ದ ಕೆಲವು ಮಾಲೀಕರೂ ನಷ್ಟಭರಿಸಲಾಗದೆ ಮತ್ತೆ ಬಸ್‍ಗಳನ್ನು ನಿಲ್ಲಿಸುವಂತಾಗಿದೆ.
ಅದರಲ್ಲೂ ಕೊಡಗು - ಚಿಕ್ಕಮಂಗಳೂರಿನಂತಹ ಜಿಲ್ಲೆಗಳಲ್ಲಿ ಈಗಿನ ಪರಿಸ್ಥಿತಿಯಲ್ಲಿ ಬಸ್‍ಗಳನ್ನು ಓಡಿಸುವದು ಅಸಾಧ್ಯವೇ ಸರಿ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು. ರಾಜ್ಯದ ಇನ್ನಿತರ ಕೆಲವು ಭಾಗಗಳಲ್ಲೂ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್‍ಗಳನ್ನು ಇದೀಗ ಮತ್ತೆ ನಿಲ್ಲಿಸಲಾಗುತ್ತಿದೆ ಎಂದು ರಮೇಶ್ ಜೋಯಪ್ಪ ತಿಳಿಸಿದ್ದಾರೆ. ಬಸ್ ಮಾಲೀಕರು ಮಾತ್ರವಲ್ಲ ಜನತೆಯೊಂದಿಗೆ, ಬಸ್ ಅವಲಂಬಿತ ಇತರ ಕುಟುಂಬದವರೂ ಸಂಕಷ್ಟದಲ್ಲಿರುವದಾಗಿ ಅವರು ಹೇಳುತ್ತಾರೆ.
-ಶಶಿ