ಮರಗೋಡು, ಜು. 28: ಸಾಮಾನ್ಯವಾಗಿ ಕೊರೊನಾ ಸೋಂಕು ಕಾಣಿಸಿಕೊಂಡವರ ಮನೆಯನ್ನು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮೊದಲು ಅಥವಾ ಕನಿಷ್ಟ ಆಸ್ಪತ್ರೆಗೆ ಸಾಗಿಸಿದ ದಿನದಿಂದಾದರೂ ಸ್ಯಾನಿಟೈಸ್ ಮಾಡಬೇಕು. ಇದು ಪ್ರಚಲಿತದಲ್ಲಿರುವ ನಿಯಮ. ಆದರೆ ನಮ್ಮ ಕಂದಾಯ ಇಲಾಖೆ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿದ ಭರ್ತಿ 12 ದಿನಗಳ ಬಳಿಕ ಸೋಂಕಿತರ ಮನೆಯ ಗೇಟನ್ನು ಮಾತ್ರ ನೆಪಮಾತ್ರಕ್ಕೆ ಸ್ಯಾನಿಟೈಸ್ ಮಾಡಿ ಫೆÇೀಟೋಗೆ ಪೆÇೀಸ್ ಕೊಟ್ಟು ತೆರಳಿದೆ. ಮರಗೋಡಿನಲ್ಲಿ ಕುಟುಂಬವೊಂದಕ್ಕೆ ಜುಲೈ 17 ರಂದು ಸೋಂಕು ದೃಢವಾಗಿ ಅಂದೇ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನಿಯಮಗಳ ಪ್ರಕಾರ ಆ ದಿನವೇ ಮನೆಯ ಆವರಣವನ್ನು ಸ್ಯಾನಿಟೈಸ್ ಮಾಡಬೇಕಿತ್ತು.

ಆದರೆ 12 ದಿನಗಳ ಬಳಿಕ ಇಂದು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಐದಾರು ಮಂದಿ ನೆಪಮಾತ್ರಕ್ಕೆ ಕೆಲವು ಕ್ಷಣಗಳ ಕಾಲ ಮನೆಯ ಗೇಟ್‍ಗೆ ಮಾತ್ರ ಸ್ಯಾನಿಟೈಸ್ ಮಾಡಿ ಬ್ಯಾನರ್ ಹಿಡಿದು ಫೆÇೀಟೋ ಕ್ಲಿಕ್ಕಿಸಿಕೊಂಡು ತೆರಳಿದ್ದಾರೆ. ಸೋಂಕಿತ ಕುಟುಂಬ ಅದಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿ ಐದು ದಿನವಾಗಿದೆ. ಇಷ್ಟು ದಿನಗಳ ಬಳಿಕ ಸ್ಯಾನಿಟೈಸ್ ಮಾಡುವ ಉದ್ದೇಶವಾದರೂ ಏನು? ಕೇವಲ ಗೇಟ್‍ನಲ್ಲಿ ಮಾತ್ರ ವೈರಸ್ ಇರುವುದೋ, ಇದ್ದರೆ 12 ದಿನಗಳ ಬಳಿಕವೂ ಆ ವೈರಸ್ ಇರುತ್ತದೆಯೋ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.