ಕೂಡಿಗೆ, ಜು. 28: ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಗುರುತಿಸಲ್ಪಟ್ಟ ಜಾಗಕ್ಕೆ ಬೇಲಿ ನಿರ್ಮಾಣದ ಮಾಡುವ ಕಾರ್ಯ ಅರಂಭವಾಗಿದೆ. ಈ ಸಂದರ್ಭ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಬಿ.ಎಸ್. ರವಿ. ಸೇರಿದಂತೆ ಹಾಡಿ ಪ್ರಮುಖರಾದ ಅಪ್ಪು, ಶಂಕರ್, ಮುತ್ತ ಸೇರಿದಂತೆ ಮತ್ತಿತರರು ಹಾಜರಿದ್ದರು.