ಗೋಣಿಕೊಪ್ಪ, ಜು. 28: ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಪೊನ್ನಂಪೇಟೆ ಸಿರಿಗನ್ನಡ ಮಹಿಳಾ ಘಟಕ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

ಕನ್ನಡ ಭಾಷೆಯಲ್ಲಿ 20 ಸಾಲು ಮೀರದಂತೆ ಕವನ ರಚಿಸಿ, ಕಳುಹಿಸಬೇಕಿದೆ. ಸ್ಪರ್ಧಿಗಳು ಕವನವನ್ನು ಟೈಪ್ ಮಾಡಿ ಅಥವಾ ಬರೆದು ಅದರ ಫೆÇೀಟೊ ತೆಗೆದು 9449123119 ಈ ಸಂಖ್ಯೆಗೆ ಆಗಸ್ಟ್ 17 ರೊಳಗೆ ವಾಟ್ಸ್‍ಆ್ಯಪ್ ಮಾಡಬೇಕಿದೆ. ಮನದಲ್ಲಿ ಮೂಡುವ ಭಾವನೆಗಳನ್ನು, ಚಿತ್ರಣಗಳನ್ನು ಕವನ ರೂಪದಲ್ಲಿ ಬರೆದು ಕಳುಹಿಸಬೇಕಿದೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಹೇಳಿಕೆÀಯಲ್ಲಿ ತಿಳಿಸಿದ್ದಾರೆ.