ಅಮ್ಮತ್ತಿ, ಜು. 28: ಕೊಡಗು ದಫ್ ಸಮಿತಿಯ ವಾರ್ಷಿಕ ಮಹಾ ಸಭೆಯು ವೀರಾಜಪೇಟೆಯ ಎನ್.ಸಿ.ಟಿ. ಎಂಟರ್ಪ್ರೈಸ್ ಕಚೇರಿಯಲ್ಲಿ ದಫ್ ಸಮಿತಿಯ ಗೌರವಾಧ್ಯಕ್ಷ ಅಕ್ಕಾಳತಂಡ ಮೊಯ್ದು ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಕೊಡಗು ದಫ್ ಸಮಿತಿಯ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸ್ಥಾಪಕಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಚೋಕಂಡಳ್ಳಿ, ಗೌರವಾಧ್ಯಕ್ಷರಾಗಿ ಅಕ್ಕಾಳತಂಡ ಮೊಯ್ದು, ಅಧ್ಯಕ್ಷರಾಗಿ ಆಲೀರ ರಶೀದ್ ಪೆÇನ್ನಂಪೇಟೆ, ಉಪಾಧ್ಯಕ್ಷರಾಗಿ ಫೈಝು ಚಿಟ್ಟಡೆ ಹಾಗೂ ಝುಬೈರ್ ಕಡಂಗ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಗುಂಡಿಗೆರೆ, ಜಂಟಿ ಕಾರ್ಯದರ್ಶಿಯಾಗಿ ತೌಸೀಫ್ ಅಹ್ಮದ್ ಅಮ್ಮತ್ತಿ, ಕೋಶಾಧಿಕಾರಿಯಾಗಿ ಬಶೀರ್ ಗುಂಡಿಗೆರೆ, ಸದಸ್ಯರಾಗಿ ಝುಬೈರ್ ಮೌಲವಿ ಬೆಂಗಳೂರು, ಅಬ್ಬಾಸ್ ಝೈನಿ, ಅಶ್ರಫ್ ಎಮ್ಮೆಮಾಡು, ಶರೀಫ್ ಕುಶಾಲನಗರ, ನಾಸಿರ್ ಕೂಡಿಗೆ, ಅಶ್ರಫ್ ವಯಕೋಲ್ ಇವರನ್ನು ಆಯ್ಕೆ ಮಾಡಲಾಯಿತು. ಶಫೀಕ್ ಗುಂಡಿಗೆರೆ ಸ್ವಾಗತಿಸಿ ತೌಸೀಫ್ ಅಹ್ಮದ್ ವಂದಿಸಿದರು.