ವೀರಾಜಪೇಟೆ, ಜು. 28: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ ಕೊರೊನಾ ಹಿನ್ನೆಲೆ ಸೀಲ್‍ಡೌನ್ ಮಾಡಲಾಗಿತ್ತು. ಅಲ್ಲಿನ ಸುಮಾರು 12 ಕುಟುಂಬಗಳಿಗೆ ಜೆಡಿಎಸ್ ವೀರಾಜಪೇಟೆ ಘಟಕದಿಂದ ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು. ಯಾರು ಕೂಡ ಎದೆಗುಂದುವ ಅವಶ್ಯಕತೆ ಇಲ್ಲ ಧೈರ್ಯದಿಂದಿರಿ ಎಂಬ ಮಾತನ್ನು ಪಿ.ಎ. ಮಂಜುನಾಥ್ ತಿಳಿಸಿದರು. ಜೆಡಿಎಸ್ ಮುಖಂಡರುಗಳಾದ ಪಿ.ಎ. ಮಂಜುನಾಥ್, ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಕೆ. ರಾಕೇಶ್ ಬಿದ್ದಪ್ಪ, ಪಿ. ರವಿ ಚಂದಪ್ಪ, ಎ.ಪಿ. ಕುಶಾಲಪ್ಪ, ದುಶ್ಯಂತ್ ರೈ ಮುಂತಾದವರು ಇದ್ದರು.