*ಗೋಣಿಕೊಪ್ಪಲು, ಜು. 27: ಬಿರುಬಿಸಿಲಿನ ಬೇಗೆಯ ನಡುವೆ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಧಾರಾಕಾರ ಮಳೆ ಸುರಿಯಿತು. ದಿಢೀರನೆ ಮೋಡ ಕವಿದು ಮಳೆ ಹನಿಯಲಾರಂಭಿಸಿತು. ಬಳಿಕ 15 ನಿಮಿಷಗಳ ಕಾಲ ನೀರು ಚೆಲ್ಲಾಡುವಂತೆ ಸುರಿಯಿತು.
ಒಂದು ವಾರದಿಂದ ಮಳೆ ಇಲ್ಲದೆ ಬತ್ತಿ ಹೋಗಿದ್ದ ಕಾಲುವೆಗಳಲ್ಲಿ ನೀರು ತುಂಬಿ ಹರಿಯಿತು.ಗೋಣಿಕೊಪ್ಪಲು ಸೇರಿದಂತೆ, ದೇವರಪುರ, ಕೈಕೇರಿ, ಅರುವತ್ತೊಕ್ಕಲು ಭಾಗಕ್ಕೆ ಮಳೆ ಸುರಿಯಿತು.