ಕರ್ನಾಟಕದಲ್ಲಿ ಐಸಿಸ್ ಉಗ್ರರಿದ್ದಾರೆ ವಿಶ್ವಸಂಸ್ಥೆ, ಜು. 25: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕ ರಿದ್ದಾರೆ ಎಂದು ಬೆಚ್ಚಿಬೀಳಿಸುವ ವರದಿ ಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ದೇಶಗಳಲ್ಲಿ ನೆಲೆಗಳನ್ನು ಕಲ್ಪಿಸಿ ಕೊಂಡಿರುವ ಸುಮಾರು 150 ರಿಂದ 200 ಅಲ್ ಖೈದಾ, ಐಸಿಸ್ ಭಯೋತ್ಪಾದಕರು ದಾಳಿ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆಯ 26ನೇ ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ ವರದಿ ಯಲ್ಲಿ ಐಸಿಸ್, ಅಲ್ ಖೈದಾ ಮತ್ತು ಅದರ ಸಹಚರ ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿದೆ. ಭಾರತದ ಅಲ್ಲಲ್ಲಿ ಅಲ್ ಖೈದಾ ಆಫ್ಘಾನಿಸ್ತಾನದ ನಿಮ್ರುಝ್, ಹೆಲ್ಮಾಂಡ್ ಮತ್ತು ಕಂದಹಾರ್ ಪ್ರಾಂತ್ಯಗಳಿಂದ ತಾನಿಬಾನ್ ಕೈಕೆಳಗೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ. ಭಾರತದಲ್ಲಿನ ಅಲ್‍ಖೈದಾ ಗುಂಪಿನ ನಾಯಕ ಒಸಮಾ ಮಹಮ್ಮೂದ್ ಆಗಿದ್ದು ಈತ ಮಾಜಿ ನಾಯಕ ಆಸಿಮ್ ಉಮರ್ ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿದ್ದಾನೆ. ಮಾಜಿ ನಾಯಕನ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಈತ ಹೊಂಚು ಹಾಕುತ್ತಿದ್ದಾನೆ ಎಂದು ಹೇಳ ಲಾಗುತ್ತಿದೆ.
ನ್ಯಾಯಾಲಯಗಳಲ್ಲಿ 18 ಲಕ್ಷ ಪ್ರಕರಣ ನಾಸಿಕ್, ಜು. 25: ಮಾರ್ಚ್ ಮತ್ತು ಜುಲೈ ನಡುವಿನ ಕೊರೊನಾ ವೈರಸ್ ಪ್ರೇರಿತ ಲಾಕ್‍ಡೌನ್ ಸಮಯದಲ್ಲಿ ಭಾರತದ ನ್ಯಾಯಾ ಲಯಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಾಪಿತವಾದ ವರ್ಚುವಲ್ ನ್ಯಾಯಾಲಯಗಳು ಹೆಚ್ಚು ದಿನ ಉಳಿಯುವುದಿಲ್ಲ ಹಾಗೂ ಸಾಮಾನ್ಯ ನ್ಯಾಯಾಲಯಗಳು ಕ್ರಮೇಣ ಮತ್ತೊಮ್ಮೆ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು. ನಾಸಿಕ್‍ನಲ್ಲಿ ನಡೆದ ದೇಶದ ಮೊದಲ ಇ-ಗವರ್ನೆನ್ಸ್ ಕೇಂದ್ರದ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತ ನಾಡುತ್ತಿದ್ದರು. ಮಾರ್ಚ್ 24 ಮತ್ತು ಜುಲೈ 24 ರ ನಡುವೆ ಲಾಕ್‍ಡೌನ್ ಸಮಯದಲ್ಲಿ ದೇಶಾದ್ಯಂತ 18,03,327 ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 7,90,112 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ನ್ಯಾಯ ಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಕುದುರೆಮುಖ ಪರಿಸರ ಸೂಕ್ಷ್ಮ ವಲಯ
ಬೆಂಗಳೂರು, ಜು. 25: ಹಲವು ವರ್ಷಗಳ ವಿಳಂಬದ ನಂತರ ಇದೀಗ ಕೇಂದ್ರ ಸರ್ಕಾರ ಕುದುರೆ ಮುಖ ರಾಷ್ಟ್ರೀಯ ಉದ್ಯಾನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‍ಝಡ್) ಎಂದು ಘೋಷಿಸಿದೆ. ಇದರೊಂದಿಗೆ 316.67 ಚದರ ಕಿ.ಮೀ. ವಿಸ್ತೀರ್ಣದ, ಸಂರಕ್ಷಿತ ಪ್ರದೇಶವು ಇಎಸ್‍ಝಡ್ ವ್ಯಾಪ್ತಿಗೆ ಒಳಪ ಡಲಿದೆ. ಇದಲ್ಲದೆ, ಇಎಸ್‍ಝಡ್‍ಗೆ ಸೇರ್ಪಡೆಗೊಂಡ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 58 ಗ್ರಾಮಗಳು ಮತ್ತು 108 ರೆವಿನ್ಯೂ ಆವರಣಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ನಿಯಮ ಗಳನ್ನು ಪಾಲಿಸ ಬೇಕಾಗುತ್ತದೆ. ಸೋಮೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿ ಕೊಂಡಂತೆ ಇಎಸ್ ಝಡ್‍ನ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗದಲ್ಲಿ ಇದು ಬರಲಿದೆ. ಜುಲೈ 2 ರಂದು ಅಧಿಸೂಚನೆ ಹೊರಡಿಸ ಲಾಗಿದ್ದು 108 ರೆವಿನ್ಯೂ ಆವರಣಗಳು ಬೆಳ್ತಂಗಡಿ, ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಾರ್ಕಳ ತಾಲೂಕುಗಳಲ್ಲಿ ಬರಲಿದೆ, ಮತ್ತೀಗ ಅವೆಲ್ಲವೂ ಇಎಸ್‍ಝಡ್ ಭಾಗವಾಗಲಿದೆ.