*ಸಿದ್ದಾಪುರ, ಜು. 26: ಅಭ್ಯತ್‍ಮಂಗಲ ಗ್ರಾಮದಲ್ಲಿ ಮತ್ತೆ ಕಾಡಾನೆಗಳÀ ಹಾವಳಿ ಆರಂಭಗೊಂಡಿದೆ. ಹಿಂಡು ಹಿಂಡಾಗಿ ದಾಳಿ ಇಟ್ಟಿರುವ ಕಾಡಾನೆಗಳು ಗ್ರಾಮದ ಸುಧಿ, ಆದರ್ಶ್, ಕುಟ್ಟಪ್ಪ ಹಾಗೂ ಅಶೋಕ್ ಅವರುಗಳ ಗದ್ದೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿವೆ.

ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಅಭ್ಯತ್ ಮಂಗಲ ಹಾಗೂ ನೆಲ್ಲಿಹುದಿಕೇರಿ ಗ್ರಾಮಸ್ಥರು ತಾ. 27 ರಂದು (ಇಂದು) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲು ನಿರ್ಧರಿಸಿದ್ದಾರೆ. ಅಭ್ಯತ್ ಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಗ್ಗೆ 10.30 ಗಂಟೆಗೆ ಸಭೆ ನಡೆಯಲಿದ್ದು, ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಹೊಸಮನೆ ವಸಂತ್ ತಿಳಿಸಿದ್ದಾರೆ.