ಮಡಿಕೇರಿ, ಜು. 25: ಕೊರೊನಾ ಹಿನ್ನೆಲೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾದ ಕೊಡಗು ಜಿಲ್ಲಾ ಡಿ.ಎ.ಆರ್. ಘಟಕದ ಎ.ಹೆಚ್.ಸಿ. ಅಶೋಕ್‍ಕುಮಾರ್ ಐ.ಸಿ. ಅವರು ಗುಣಮುಖಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಕೊಡಗು ಜಿಲ್ಲಾ ಪೆÇಲೀಸ್ ವತಿಯಿಂದ ಡಿ.ಎ.ಆರ್. ಕೇಂದ್ರ ಸ್ಥಾನದ ಆವರಣದಲ್ಲಿ ಅವರಿಗೆ ಸ್ವಾಗತ ಕೋರಲಾಯಿತು. ಈ ಸಂದರ್ಭ ಮಡಿಕೇರಿ ಉಪವಿಭಾಗದ ಡಿ.ವೈ.ಎಸ್.ಪಿ. ದಿನೇಶ್‍ಕುಮಾರ್ ಬಿ.ಪಿ., ಡಿ.ಎ.ಆರ್. ಪೆÇಲೀಸ್ ನಿರೀಕ್ಷಕ ರಾಚಯ್ಯ ಎಸ್., ಆರ್.ಎಸ್.ಐ. ಭಾನುಪ್ರಕಾಶ್ ಜಿ.ವಿ., ಜಿಲ್ಲಾ ನಿಸ್ತಂತು ಘಟಕದ ಪಿ.ಎಸ್.ಐ. ಸೆಲ್ವಂ ಹರೀಶ್ ಹಾಗೂ ಇತರ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.