ಮಹಿಳಾ ಪೊಲೀಸ್ ಠಾಣೆಯಾದರೂ ಇದಕ್ಕೆ ಪುರುಷರೊಬ್ಬರು ಇನ್ಸ್‍ಪೆಕ್ಟರ್ ಆಗಿರುವುದು ವಿಶೇಷ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಠಾಣೆಗಳನ್ನು ಉನ್ನತೀಕರಿಸಲಾಗಿದೆ. ಇದೀಗ ಹಲವು ತಿಂಗಳಿನಿಂದ ಇನ್ಸ್‍ಪೆಕ್ಟರ್ ಆಗಿ ಸೋಮೇಗೌಡ ಅವರು ಕರ್ತವ್ಯದಲ್ಲಿದ್ದಾರೆ. ಮಹಿಳಾ ಎಸ್.ಐ. ಹುದ್ದೆ ಇನ್ನಷ್ಟೆ ಭರ್ತಿಯಾಗಬೇಕಿದೆ.