ಚೆಟ್ಟಳ್ಳಿ, ಜು. 25: ವಿದೇಶದಲ್ಲಿ ಅನಿವಾಸಿ ಕನ್ನಡಿಗರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಕೊಡಗು ಘಟಕದ ನೂತನ ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಬಜೆಗುಂಡಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯು, ಆನ್‍ಲೈನ್ ಮೂಲಕ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಸಮಿತಿಯ ಅಧ್ಯಕ್ಷ ಹುಸೈನ್ ಫೈಜಿ ಅವರ ನೇತೃತ್ವದಲ್ಲಿ ನಡೆಯಿತು.

ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಕೊಡಗು ಸಮಿತಿಯ ನೂತನ ಉಪಾಧ್ಯಕ್ಷರಾಗಿ, ಅಬ್ದುಲ್ ರಜಾಕ್ ಬಜೆಗುಂಡಿ ಅಬುಧಾಬಿರವರನ್ನು ಆಡಳಿತ ಸಮಿತಿಯ ಸರ್ವ ಸದಸ್ಯರ ಒಮ್ಮತ್ತದ ತೀರ್ಮಾನದಿಂದ ಆಯ್ಕೆ ಮಾಡಲಾಯಿತು.

ಅಬ್ದುಲ್ ರಜಾಕ್ ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಅಬುಧಾಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಕೊಡಗು ಆಡಳಿತ ಮಂಡಳಿಯ ಆನ್‍ಲೈನ್ ಸಭೆಯಲ್ಲಿ ಸೌದಿ ಅರೇಬಿಯಾ, ಬಹರೈನ್, ಒಮಾನ್, ಯುನೈಟೆಡ್ ಅರಬ್ ಎಮರೇಟ್ಸ್ ಮುಂತಾದ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.