ನಾಪೆÇೀಕ್ಲು, ಜು. 25 : ಸಮೀಪದ ಎಮ್ಮೆಮಾಡು ಗ್ರಾಮದ ಕುರುಳಿ ಮಾಂದಲ್ ಬಳಿಯ ನಿವಾಸಿ 48 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ತಹಶೀಲ್ದಾರ್ ಮಹೇಶ್ ಮತ್ತು ಸಿಬ್ಬಂದಿ ಎಮ್ಮೆಮಾಡು ಕುರುಳಿಮಾಂದಲ್‍ನಲ್ಲಿರುವ ಸೊಂಕಿತನ ಮನೆ ಮತ್ತು ಪಕ್ಕದ ಎರಡು ಮನೆಗಳನ್ನು ಸೀಲ್‍ಡೌನ್ ಮಾಡಿದರು.
ಈ ಸಂದರ್ಭ ನೊಡೇಲ್ ಅಧಿಕಾರಿ ಬಿಂದುಶ್ರೀ, ಕಂದಾಯ ಪರಿವೀಕ್ಷಕ ಶಿವಕುಮಾರ್, ಎಮ್ಮೆಮಾಡು ಪಿ.ಡಿ.ಒ ಮೀನಾಕುಮಾರಿ, ಕಂದಾಯ ಇಲಾಖೆಯ ಸಿಬ್ಬಂದಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.