ಸುಂಟಿಕೊಪ್ಪ, ಜು. 24: ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ಗದ್ದೆ ಹಳ್ಳ ಶಾಖೆ ವತಿಯಿಂದ ಬ್ಯಾಂಕಿನ ಸಂಸ್ಥಾಪಕ ಸಯಾಜಿರಾವ್ ಗಾಯಕ್‍ವಾಡ್ ಅವರ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಬ್ಯಾಂಕಿನ ಗ್ರಾಹಕರಿಗೆ ಸಿಹಿಯನ್ನು ಹಂಚಲಾಯಿತು.
ನಂತರ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಎಸ್.ಆರ್.ಕೆ. ರೆಡ್ಡಿ ಬ್ಯಾಂಕ್ ಆಫ್ ಬರೋಡಾ ದೇಶ ವಿದೇಶಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರಿಗೆÀ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಇರುವುದಾಗಿ ತಿಳಿಸಿದರು. ಈ ಸಂದರ್ಭ ಬ್ಯಾಂಕ್‍ನ ಜಯ ಜಿ. ಹೆಗ್ಡೆ, ತೇಜೇಸ್ವರಿ ಸತೀಶ್, ರವಿ, ಸಂತೋಷ್ ಹಾಜರಿದ್ದರು.