ಮಡಿಕೇರಿ, ಜು. 24: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುಮೋದಿತ ಫಲಾನುಭವಿಗಳಿಗೆ 2017-18ನೇ ಸಾಲಿನಲ್ಲಿ ಹೆಚ್.ಪಿ ಅನಿಲ ಸಿಲಿಂಡರ್ ಒದಗಿಸಲಾಗಿದ್ದು, ಪ್ರಸ್ತುತ ಈ ಫಲಾನುಭವಿಗಳಿಗೆ 2020-21ನೇ ಸಾಲಿನಲ್ಲಿ 2 ರೀಫಿಲ್ಲಿಂಗ್ ಸಿಲಿಂಡರ್ ಉಚಿತವಾಗಿ ನೀಡುವ ಸಂಬಂಧ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ. ಬಿಡ್ಡುಗಳನ್ನು ಸಲ್ಲಿಸಲು ಆಗಸ್ಟ್ 14 ಕೊನೆಯ ದಿನವಾಗಿದೆ. ಮೊದಲನೆಯ ತಾಂತ್ರಿಕ ಹಾಗೂ ಆರ್ಥಿಕ ಬಿಡ್ಡು ಆಗಸ್ಟ್ 17 ಮತ್ತು ಮರು ಟೆಂಡರ್ ತಾಂತ್ರಿಕ ಹಾಗೂ ಆರ್ಥಿಕ ಬಿಡ್ಡು ಆಗಸ್ಟ್ 27 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನಿಬಂಧನೆಗಳ ಬಗ್ಗೆ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿ ಯಿಂದ ಪಡೆಯಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿ ಕಾರಿ ತಿಳಿಸಿದ್ದಾರೆ.