ಸುಂಟಿಕೊಪ್ಪ, ಜು. 24: ಇಲ್ಲಿನ ಎಮ್ಮೆಗುಂಡಿ ರಸ್ತೆ ಬದಿಯ ಶಿವರಾಮ ರೈ ಬಡಾವಣೆಯಲ್ಲಿನ ಒಂದೇ ಮನೆಯ 6 ಜನ ಸದಸ್ಯರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿತ್ತು. ಇದೀಗ 5 ಮಂದಿ ಗುಣ ಮುಖರಾಗಿ ಆಗಮಿಸಿದರಿಂದ ಬಡಾವಣೆಯ ನಿವಾಸಿಗಳು ಯಾವುದೆ ಸಂಕೋಚ ವ್ಯಕ್ತಪಡಿಸದೆ ಗುÀಣಮುಖರಾದ 5 ಜನ ಸದಸ್ಯರಿಗೆ ಚಪ್ಪಾಳೆ ತಟ್ಟಿ ಹೃದಯಸ್ಪರ್ಶಿ ಸ್ವಾಗತ ನೀಡಿ ಇವರ ಮೇಲೆ ಹೂವುಗಳನ್ನು ಸುರಿದರು. ಈ ಮೂಲಕ ಸಂತೋಷದಿಂದ ಬಡಾವಣೆಗೆ ಬರಮಾಡಿಕೊಂಡರು. ಈ ಸಂದರ್ಭ ಗುಣ ಮುಖರಾಗಿ ಆಗಮಿಸಿದ ಸದಸ್ಯರೊಬ್ಬರು ಮಾತನಾಡಿ, ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಉತ್ತಮ ಚಿಕಿತ್ಸೆ ನೀಡಿರುವುದರಿಂದ ನಾವೆಲ್ಲರೂ ಗುಣ ಮುಖರಾಗಿ ಬಂದಿದ್ದೇವೆ ಎಂದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಬಾಲು, ರಮೇಶ ಸಾರ್ವಜನಿಕರು ಹಾಜರಿದ್ದರು.