ಕುಶಾಲನಗರ, ಜು. 24: ಹಾರಂಗಿ ಯೋಜನಾ ವೃತ್ತದ ನೀರಾವರಿ ಸಲಹಾ ಸಮಿತಿ ಸದಸ್ಯರ ಸಭೆ ಈ ತಿಂಗಳ 28 ರಂದು ಹಾರಂಗಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಸೋಮವಾರಪೇಟೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆಆರ್ ನಗರ ಮತ್ತು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರಗಳ ಶಾಸಕರುಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು.

ಸಭೆಯಲ್ಲಿ ಅಣೆಕಟ್ಟೆ ನಿರ್ವಹಣೆ ಮತ್ತು ಜಲಾಶಯದಲ್ಲಿ ನೀರು ಸಂಗ್ರಹ ಹಾಗೂ ಬಿಡುಗಡೆ ಮಾಡುವುದನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ನೋಟಿಸ್ ಬಗ್ಗೆ ಚರ್ಚೆ ನಡೆಯಲಿದೆ.