ಮಡಿಕೇರಿ, ಜು. 24: ಸೂಕ್ಷ್ಮ ಅಲ್ಪಸಂಖ್ಯಾತ ದೇಶಭಕ್ತ ಕೊಡವ ಬುಡಕಟ್ಟು ಜನರನ್ನು ಶಾಸನಬದ್ಧವಾಗಿ ರಕ್ಷಿಸಲು ಎಸ್ಟಿ ಟ್ಯಾಗ್ ಮತ್ತು ಬುಡಕಟ್ಟು ಜನರನ್ನು ಶಾಸನಬದ್ಧವಾಗಿ ರಕ್ಷಿಸಲು ಎಸ್ಟಿ ಟ್ಯಾಗ್ ಮತ್ತು ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯ ಆಕಾಂಕ್ಷೆಯನ್ನು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಬಹಿರಂಗವಾಗಿ ಬೆಂಬಲಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಮನವಿ ಮಾಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮತ್ತು ನಿಷ್ಪಕ್ಷಪಾತ ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಕೊಡವ ಬುಡಕಟ್ಟು ಶಾಸನಬದ್ಧ ಖಾತರಿಯ ಮೂಲಕ ಅಧಿಕಾರವನ್ನು ನೀಡಬೇಕು ಎಂದು ಆಗ್ರಹಿಸಿ ಎಸ್ಟಿ ಟ್ಯಾಗ್ ಕೊಡವ ಬುಡಕಟ್ಟು ಅನುವಂಶಿಯತೆಯ ಊರ್ಜಿತ್ವ ಮತ್ತು ಪೂರ್ವಜತೆಯನ್ನು ದೃಢಪಡಿಸುತ್ತದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಸಿ.ಎಂ. ಯಡಿಯೂರಪ್ಪ ಈ ಕುರಿತು ಬೆಂಬಲಿಸುವಂತೆ ಮನವಿ ಮಾಡಿದರು.