ಗೋಣಿಕೊಪ್ಪಲು, ಜು. 24: ಗೋಣಿಕೊಪ್ಪಲು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿರುವುದಾಗಿ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರದ ಪ್ರತಿ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಹೊಸ ನಿಯಮ ಅನುಷ್ಠಾನಗೊಳ್ಳಲಿದ್ದು ಇನ್ನುಳಿದ ದಿನಗಳಂದು ಯಥಾಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಪೆÇನ್ನಂಪೇಟೆ ಮಾರ್ಗದಿಂದ ಬರುವ ವಾಹನಗಳು ಬೈಪಾಸ್ ರಸ್ತೆಯ ಮೂಲಕ ಪ್ರವೇಶ ಮಾಡಬಹುದು. ಮೈಸೂರಿನ ಕಡೆಗೆ ಹೋಗುವ ವಾಹನಗಳು ಪೆÇನ್ನಂಪೇಟೆ ಜಂಕ್ಷನ್‍ನಿಂದ ಮೈಸೂರು ರಸ್ತೆ ಪ್ರವೇಶ ಮಾಡಬಹುದು.
ವೀರಾಜಪೇಟೆಯಿಂದ ಬರುವ ವಾಹನಗಳು ಮೈಸೂರು ರಸ್ತೆಯ ಮಾರ್ಗವಾಗಿ ಸಂಚರಿಸಿ ಪೆÇನ್ನಂಪೇಟೆ, ಪಾಲಿಬೆಟ್ಟ ಹಾಗೂ ತಿತಿಮತಿ ಕಡೆಗೆ ಹೋಗಬಹುದು.
ಮೈಸೂರಿನ ಕಡೆಯಿಂದ ಹಾಗೂ ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳು (ಬಸ್ ಲಾರಿ ಹೊರತುಪಡಿಸಿ) ನಗರ ಪ್ರವೇಶ ಮಾಡದೇ ಪೆÇನ್ನಂಪೇಟೆ ಜಂಕ್ಷನ್ ಮೂಲಕ ಬೈಪಾಸ್ ಮಾರ್ಗದಲ್ಲಿ ವೀರಾಜಪೇಟೆ ಕಡೆಗೆ ಹೋಗಬಹುದಾಗಿದೆ ಎಂದು ರಾಮರೆಡ್ಡಿ ತಿಳಿಸಿದ್ದಾರೆ.