ಮಡಿಕೇರಿ: ದಲಿತ ಸಂಘರ್ಷ ಸಮಿತಿಯ ವತಿಯಿಂದ ಚೆನ್ನಯ್ಯನಕೋಟೆಯಲ್ಲಿ ಅಗತ್ಯ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಲಾಕ್ಡೌನ್ನಿಂದ ಜನರು ಕೆಲಸವಿಲ್ಲದೆ, ಹಣಕಾಸಿನ ಸಮಸ್ಯೆಗೆ ಸಿಲುಕಿ ದಿನಸಿ ಆಹಾರದ ಕೊರತೆಗೆ ಒಳಗಾಗಿದ್ದರು. ಇದನ್ನು ತಿಳಿದುಕೊಂಡ ಡಿಎಸ್ಎಸ್ನ ವಿಭಾಗೀಯ ಸಂಚಾಲಕ ವೀರಭದ್ರಯ್ಯ ಅವರು ಕೊಡಗು ಜಿಲ್ಲಾ ಸಂಚಾಲಕರ ಸಹಕಾರದೊಡನೆ ಸುಮಾರು 50 ಮಂದಿಗೆ ಆಹಾರದ ಕಿಟ್ ವಿತರಿಸಿದರು.
ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದ ಎನ್. ವೀರಭದ್ರಯ್ಯ, ಸಮಸ್ಯೆಗೆ ಸಿಲುಕಿದ ಜನರಿಗೆ ತಮ್ಮಿಂದ ಆದ ಸಹಾಯ ಮಾಡುವುದು ನಮ್ಮ ಸಂಘದ ಉದ್ದೇಶ. ಇದು ಬಡ ಜನರ ಜೀವನಕ್ಕೆ ನೆರವಾಗಬಹುದು ಎಂದರು. ಹೆಚ್.ಎಲ್. ದಿವಾಕರ್ ಮಾತನಾಡಿ, ಕೊಡಗಿನೆಲ್ಲೆಡೆ ನಾವು ಈ ರೀತಿಯಾಗಿ ಸಾಮಾಜಿಕ ಕಳಕಳಿಯಿಂದ ಹಾಗೂ ಬಡಜನರ ಸಂಕಷ್ಟವನ್ನರಿತು ಈ ಕಿಟ್ ವಿತರಣೆ ನಡೆಸುತ್ತಿರುವುದಾಗಿ ಹೇಳಿದರು. ಜಿ.ಪಂ. ಸದಸ್ಯೆ ಲೀಲಾವತಿ ಡಿ.ಎಸ್.ಎಸ್ನ ಕಾರ್ಯವನ್ನು ಶ್ಲಾಘಿಸಿದರು.
ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಸಂಚಾಲಕ ದೀಪಕ್ ಎ.ಪಿ., ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯೆ ಶಿಲ್ಪಾ, ಮಾಜಿ ಜಿ.ಪಂ. ಸದಸ್ಯ ಸಣ್ಣಯ್ಯ, ಇತರರು ಹಾಜರಿದ್ದರು.ಸುಂಟಿಕೊಪ್ಪ: ಎಸ್ಡಿಪಿಐ ವತಿಯಿಂದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಗ್ಹಳ್ಳಿ ತೋಟದಲ್ಲಿ ಸೀಲ್ಡೌನ್ ಪ್ರದೇಶದ ನಿವಾಸಿಗಳಿಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಕೂರ್ಗ್ಹಳ್ಳಿ ತೋಟದ ಯುವತಿಯೋರ್ವಳಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಮುಂಜಾಗ್ರತ ಕ್ರಮವಾಗಿ 12 ಮನೆಗಳನ್ನು ಸೀಲ್ಡೌನ್ಗೊಳಿಸಲಾಗಿದೆ. ಈ ಭಾಗದಲ್ಲಿ ತೋಟ ಕಾರ್ಮಿಕರೇ ಹೆಚ್ಚಿದ್ದು, ಎಸ್ಡಿಪಿಐ ವತಿಯಿಂದ ಆಹಾರ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಕುಮಾರ್, ಬಿಲ್ಕಲೆಕ್ಟರ್ ಧನಂಜಯ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯೆ ನಾಗರತ್ನ, ಎಸ್ಡಿಪಿಐ ಬಾಶಿತ್, ವಲಯಾಧ್ಯಕ್ಷ ಉಸ್ಮಾನ್, ಲತೀಫ್ ಹಾಗೂ ಜುಬೇರ್ ಇದ್ದರು.ಕುಶಾಲನಗರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜನತಾ ಕಾಲೋನಿ ಸೀಲ್ಡೌನ್ ಪ್ರದೇಶದ ಕುಟುಂಬಗಳಿಗೆ ತರಕಾರಿ ಸಾಮಗ್ರಿ ಕಿಟ್ ವಿತರಣೆ ಮಾಡಲಾಯಿತು. ಸಮಿತಿಯ ಕೊಡಗು ಜಿಲ್ಲಾಧ್ಯಕ್ಷ ಎಲ್.ಎಂ. ನಾಗರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸೌಮ್ಯ, ಉದ್ಯಮಿ ರಮೇಶ್ ಮತ್ತಿತರರು ಇದ್ದರು.ಸುಂಟಿಕೊಪ್ಪ: ಇಲ್ಲಿನ ಎಮ್ಮೆಗುಂಡಿ ರಸ್ತೆಯ ಶಿವರಾಮ ರೈ ಬಡಾವÀಣೆಯನ್ನು ತಾ. 13 ರಂದು ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ ಸುಮಾರು 20 ಕ್ಕೂ ಮಿಕ್ಕಿ ಮನೆಗಳಿದ್ದು ಈ ಭಾಗದಿಂದ ಕೂಲಿ ಕೆಲಸ, ಗಾರೆ ಕೆಲಸ, ವಾಹನ ಚಾಲಕರು, ಸಣ್ಣಪುಟ್ಟ ವ್ಯಾಪಾರಸ್ಥರು ಇನ್ನಿತರರು ಕೆಲಸಕ್ಕೆ ಹೋಗುತ್ತಿದ್ದು, ಇದೀಗ ಸೀಲ್ಡೌನ್ ಆಗಿರುವುದರಿಂದ ಸುಂಟಿಕೊಪ್ಪ ತರಕಾರಿ ವ್ಯಾಪಾರಿ ಶಾಜೀರ್ ಎಂಬವರು 45 ಮಂದಿ ಕುಟುಂಬಗಳಿಗೆ ಉಚಿತವಾಗಿ ತರಕಾರಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಸಿಬ್ಬಂದಿ ಪುನೀತ್, ಸುಲ್ತಾನ್, ತನ್ವೀರ್, ಸಲೀಂ, ಇರ್ಫಾನ್ ಹಾಜರಿದ್ದರು.