ಗೋಣಿಕೊಪ್ಪ ವರದಿ, ಜು. 24: ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಭೇಟಿ ನೀಡಿ, ಕೊರೊನಾ ಸೇನಾನಿಗಳಿಗೆ ಧೈರ್ಯ ತುಂಬಿದರು.
ಪಿಪಿಟಿ ಕಿಟ್ ಧರಿಸಿ ತೆರಳಿದ್ದ ಪ್ರಥ್ಯು ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾ ಹಿಮ್ಮೆಟ್ಟಲು ತೊಡಗಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮೀಪದ ನಿಟ್ಟೂರು ವ್ಯಾಪ್ತಿಯಲ್ಲಿ ಸೋಂಕು ಇರುವುದರಿಂದ ಹೆಚ್ಚು ಜಾಗೃತೆ ವಹಿಸುವಂತೆ ಮನವಿ ಮಾಡಿಕೊಂಡರು.