ಗೋಣಿಕೊಪ್ಪ ವರದಿ, ಜು. 23 : ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಬೊಮ್ಮಂಡ ರೋಶನ್ ಅಯ್ಯಪ್ಪ, ಕಾರ್ಯದರ್ಶಿಯಾಗಿ ಮನೆಯಪಂಡ ಗೌತಂ ಪೊನ್ನಪ್ಪ, ಖಜಾಂಜಿಯಾಗಿ ಪೊರ್ಕೋಂಡ ಬೋಪಣ್ಣ ಪದಗ್ರಹಣ ಸ್ವೀಕಾರ ಮಾಡಿದರು.

ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಮಾಚಿಮಾಡ ಲವ ಗಣಪತಿ ಪದಗ್ರಹಣ ಬೋಧಿಸಿದರು. ನಿರ್ಗಮಿತ ಅಧ್ಯಕ್ಷೆ ನಡಿಕೇರಿಯಂಡ ಜ್ಯೋತಿ ಪೊನ್ನಪ್ಪ ಅಧಿಕಾರ ಹಸ್ತಾಂತರ ಮಾಡಿದರು. ರೋಶನ್ ಅಯ್ಯಪ್ಪ ಉದ್ಘಾಟಿಸಿ ಚಾಲನೆ ನೀಡಿದರು. ಕ್ಲಬ್ ಆಡಳಿತ ಮುಖ್ಯಸ್ಥ ಡಾ. ವಾಟೇರೀರ ಸುಬ್ರಮಣಿ, ಕಾರ್ಯದರ್ಶಿ ಪೊರ್ಕೋಂಡ ಸವಿತಾ ಬೋಪಣ್ಣ, ಖಜಾಂಜಿ ಬೊಮ್ಮಂಡ ರಕ್ಷಿತ್ ಅಯ್ಯಪ್ಪ ಉಪಸ್ಥಿತಿತರಿದ್ದರು.