ಕೂಡಿಗೆ, ಜು. 23: ಕಾವೇರಿ ನೀರಾವರಿ ನಿಗಮಕ್ಕೆ ಒಳಗೊಂಡ ಹಾರಂಗಿ ನೀರಾವರಿ ಇಲಾಖೆಗೆ ಸೇರಿದ ಚಿಕ್ಲಿಹೊಳೆ ಜಲಾಶಯದಿಂದ ಇಂದು ಕಾಲುವೆಗಳ ಮೂಲಕ 20 ಕ್ಯೂಸೆಕ್ ನೀರನ್ನು ಹರಿಸಲಾಗಿದೆ.

ಚಿಕ್ಲಿಹೊಳೆ ಜಲಾಶಯದ ಎರಡು ದಂಡೆಗಳಲ್ಲಿ ಕಾಲುವೆಯಿದ್ದು, ಇಂದು ಬಲದಂಡೆಯಲ್ಲಿ ನಂಜರಾಯಪಟ್ಟಣದವರೆಗೆ, ಎಡದಂಡೆಯ ಕಾಲುವೆಯಲ್ಲಿ ಗುಡ್ಡೆಹೊಸೂರು, ಮಾದಪಟ್ಟಣದವರೆಗೆ ಬೇಸಾಯಕ್ಕೆ ನೀರನ್ನು ಹರಿಸಲಾಗಿದೆ.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ಕಿರಣ್ ಇದ್ದರು.