ಪೆÇನ್ನಂಪೇಟೆ, ಜು. 23: ಇಲ್ಲಿನ ಎಂ. ಜಿ ನಗರದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಾಗಿದ್ದ ಮನೆಯ ನೂರು ಮೀಟರ್ ವ್ಯಾಪ್ತಿಯನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಸೋಂಕಿತ ವಲಯಕ್ಕೆ ವೈರಸ್ ನಾಶಕ ದ್ರಾವಣ ಸಿಂಪಡಿಸಲಾಗಿದೆ. ಈ ಸಂದರ್ಭ ಪೆÇನ್ನಂಪೇಟೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಕಂದಾಯ ಅಧಿಕಾರಿ ರಾಧಾಕೃಷ್ಣ, ಪೆÇನ್ನಂಪೇಟೆ ಠಾಣೆ ಎಎಸ್ ಐ ಉದಯ, ಗ್ರಾಮ ಪಂಚಾಯಿತಿ ಸದಸ್ಯರು, ಅರೋಗ್ಯ ಕಾರ್ಯಕರ್ತರು ಇದ್ದರು.

ತಾ. 20 ರಿಂದ ಎಂ.ಜಿ. ನಗರದ ಯುವಕರ ತಂಡ, ಬಡಾವಣೆಯ ಮುಖ್ಯ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ, ತಮ್ಮ ಬಡಾವಣೆಗೆ ಬರುವ ಪ್ರತಿಯೊಬ್ಬರನ್ನೂ ಕೂಡ ಥರ್ಮಲ್ ಸ್ಕ್ಯಾನ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಒಳಬಿಡುತ್ತಿದ್ದಾರೆ. ಯುವಕರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಯುವಕರ ಕಾರ್ಯಕ್ಕೆ ಪೆÇ್ರೀತ್ಸಾಹ ನೀಡಲಾಗುತ್ತಿದ್ದು, ಥರ್ಮಲ್ ಸ್ಕ್ಯಾನರ್ ಯಂತ್ರ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಿಕೊಟ್ಟಿದೆ. -ಚನ್ನನಾಯಕ