ಮಡಿಕೇರಿ, ಜು. 23: ಜಿಲ್ಲೆಯಲ್ಲಿ ತಾ. 23 ರಂದು 16 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 314 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 236 ಜನ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾaರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದು, 73 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 102 ನಿಯಂತ್ರಿತ ಪ್ರದೇಶಗಳಿವೆ.ವೀರಾಜಪೇಟೆ ತಾಲೂಕಿನ ಹೈಸೊಡ್ಲೂರುವಿನಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 50 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಪೋಸ್ಟಲ್ ಕ್ವಾರ್ಟಸ್ನ 49 ಮತ್ತು 21 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ವೀರಾಜಪೆಟೆ ತಾಲೂಕಿನ ಜೋಡುಬೀಟಿಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 23 ಮತ್ತು 20 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಎಂ.ಜಿ. ನಗರದ ನಿವಾಸಿ 41 ವರ್ಷದ ಪುರುಷ ಮತ್ತು ಮಡಿಕೇರಿಯ ಮುನೀಶ್ವರ ದೇವಾಲಯದ ಸಮೀಪವಿರುವ ಸುದರ್ಶನ ಬಡಾವಣೆಯ 32 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ರಸ್ತೆಯ ರಾಘವೇಂದ್ರ ದೇವಾಲಯದ ಬಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಾದ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
(ಮೊದಲ ಪುಟದಿಂದ) ಅಲ್ಲದೇ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆ ತಾಲೂಕಿನ ಅಬೂರ್ ಕಟ್ಟೆ ನಿವಾಸಿ 69 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.
ಬೆಂಗಳೂರಿನಿಂದ ಮರಳಿರುವ ಕುಶಾಲನಗರದ ಹೆಬ್ಬಾಲೆಯ ಬನಶಂಕರಿ ರಸ್ತೆಯ 31 ವರ್ಷದ ಪುರುಷನಿಗೆ ಮತ್ತು ವೀರಾಜಪೇಟೆ ತಾಲೂಕಿನ ಕೊಡವ ಸಮಾಜ ಸಮೀಪದ ಅಪ್ಪಯ್ಯ ಸ್ವಾಮಿ ರಸ್ತೆಯ 75 ಮತ್ತು 23 ವರ್ಷದ ಮಹಿಳೆಯರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ನಾಪೋಕ್ಲು ಬಳಿಯ ಬೇತು ಗ್ರಾಮದ 52 ವರ್ಷ ಪ್ರಾಯದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ. ಮೈಸೂರಿನಿಂದ ಆಗಮಿಸಿದ್ದ ಮಡಿಕೇರಿ ಸನಿಹದ ನೀರುಕೊಲ್ಲಿಯ ಕಲ್ಲುಕೋರೆ ಬಳಿಯ ನಾಗರಾಜದೇಗುಲದ ಬಳಿಯ ನಿವಾಸಿ 45 ವರ್ಷ ಪ್ರಾಯದ ಪುರುಷನಲ್ಲಿ ಹಾಗೂ ಕಣಿವೆಯ ಸೋಂಕಿತನ ಸಂಪರ್ಕ ಹೊಂದಿದ್ದ 21 ವರ್ಷದ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದೆ.
ಹೊಸ ನಿಯಂತ್ರಿತ ಪ್ರದೇಶಗಳು
ಇದರೊಂದಿಗೆ ಜಿಲ್ಲೆಯಲ್ಲಿ 8 ಕಂಟೈನ್ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ ಎಂ.ಜಿ.ನಗರ ಪೆÇನ್ನಂಪೇಟೆ, ಮುನೀಶ್ವರ ದೇವಸ್ಥಾನದ ಹತ್ತಿರ ಸುದರ್ಶನ್ ಬಡಾವಾಣೆ ಮಡಿಕೇರಿ, ಅಂಚೆ ಕ್ವಾರ್ಟರ್ಸ್ ಮಡಿಕೇರಿ, ರಾಘವೇಂದ್ರ ದೇವಸ್ಥಾನದ ಹತ್ತಿರ, ಮ್ಯಾನ್ಸ್ ಕಂಪೌಂಡ್ ರಸ್ತೆ ಮಡಿಕೇರಿ, ಅಬೂರ್ಕಟ್ಟೆ ಸೋಮವಾರಪೇಟೆ ಮತ್ತು ಬನಶಂಕರಿ ದೇವಾಲಯ ರಸ್ತೆ, ಹೆಬ್ಬಾಲೆ ಕುಶಾಲನಗರ ಭಾಗದಲ್ಲಿ, ನಾಪೋಕ್ಲು ಬಳಿಯ ಬೇತು ಗ್ರಾಮದ ಕೆನರಾ ಬ್ಯಾಂಕ್ ಹಿಂಭಾಗ, ನೀರುಕೊಲ್ಲಿಯ ಕಲ್ಲುಕೋರೆ ಬಳಿಯ ನಾಗರಾಜ ದೇವಸ್ಥಾನ ಬಳಿ ಕಂಟೈನ್ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ.
21 ನಿಯಂತ್ರಿತ ವಲಯಗಳ ತೆರವು
ಅಲ್ಲದೆ 21 ಕಂಟೈನ್ಮೆಂಟ್ ವಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಬಾವಲಿ ಮಡಿಕೇರಿ, ಚೇರಂಬಾಣೆ ಮಡಿಕೇರಿ, ಅಪ್ಪಯ್ಯಸ್ವಾಮಿ ರಸ್ತೆ ವೀರಾಜಪೇಟೆ, ಬೊಳ್ಳೂರು ಸೋಮವಾರಪೇಟೆ, ಗೋಣಿಕೊಪ್ಪ ಮೋರ್ ಸ್ಟೋರ್ ಎದುರು ಪ್ರದೇಶ, ಹೆಬ್ಬಾಲೆ ಮುಖ್ಯ ರಸ್ತೆ ಪ್ರದೇಶ, ಕೈಕಾಡು ಪಾರಣೆ, ಕಿರುಂದಾಡು ಪಾರಾಣೆ, ಕೊಟ್ಟಲು ಸಂಪಾಜೆ, ಕೊಟ್ಟೂರು ಮಡಿಕೇರಿ, ಕುದುರೆಪಾಯ ಮಡಿಕೇರಿ, ಮಣಜೂರು, ಸೋಮವಾರಪೇಟೆ, ಮರಪಾಲ ತಿತಿಮತಿ ವೀರಾಜಪೇಟೆ, ನಂಜರಾಯಪಟ್ಟಣ, ಬೆಳ್ಳಿ ಕಾಲೋನಿ, ನಂಜರಾಯಪಟ್ಟಣ ಪೈಸಾರಿ, ಪೆರಾಜೆ ಮಡಿಕೇರಿ, ಸಂಪಾಜೆ ಆರೋಗ್ಯ ವಸತಿ ಗೃಹ, ಸಣ್ಣ ಪಿಲಿಕೋಟು ಮಡಿಕೇರಿ, ತಲಕಾವೇರಿ ಮಡಿಕೇರಿ, ತಾಮರ ಕಕ್ಕಬ್ಬೆ ಮತ್ತು ತಣ್ಣಿಮನಿ ಮಡಿಕೇರಿ.