ಸುಂಟಿಕೊಪ್ಪ, ಜು. 23: ಎಸ್‍ಡಿಪಿಐ ವತಿಯಿಂದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಗ್ ಹಳ್ಳಿ ತೋಟದಲ್ಲಿ ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಕೂರ್ಗ್‍ಹಳ್ಳಿ ತೋಟದ ಯುವತಿ ಓರ್ವಳಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ 12 ಮನೆಗಳನ್ನು ಸೀಲ್‍ಡೌನ್‍ಗೊಳಿಸಲಾಗಿದೆ. ಈ ಭಾಗದಲ್ಲಿ ತೋಟ ಕಾರ್ಮಿಕರೇ ಹೆಚ್ಚಿದ್ದು, ಎಸ್‍ಡಿಪಿಐ ವತಿಯಿಂದ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಕುಮಾರ್, ಬಿಲ್‍ಕಲೆಕ್ಟರ್ ಧನಂಜಯ, ಸುಂಟಿಕೊಪ್ಪ ಗ್ರಾ.ಪಂ.ಸದಸ್ಯೆ ನಾಗರತ್ನ, ಎಸ್‍ಡಿಪಿಐ ಬಾಶಿತ್, ವಲಯಾಧ್ಯಕ್ಷ ಉಸ್ಮಾನ್, ಲತೀಫ್ ಹಾಗೂ ಜುಬೇರ್ ಇದ್ದರು.