ವೀರಾಜಪೇಟೆ, ಜು. 22: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿದ್ದ ಶ್ರಾವಣ ಪೂಜೋತ್ಸವವನ್ನು ಕೊರೊನಾ ವೈರಸ್ ನಿರ್ಬಂಧದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಚೋಕಂಡ ರಮೇಶ್ ತಿಳಿಸಿದ್ದಾರೆ.

ತಾ. 25 ರಂದು ಆರಂಭಗೊಂಡು ಆ. 15ರ ತನಕ ನಾಲ್ಕು ಶನಿವಾರಗಳು ಶ್ರಾವಣ ಶನಿವಾರವಾಗಿದೆ. ದೇವಾಲಯದಲ್ಲಿ ಎಂದಿನಂತೆ ಶನಿವಾರ, ಇತರ ದಿನಗಳಲ್ಲಿ ನಡೆಯುವ ಪೂಜೆ ಮುಂದುವರೆಯಲಿದೆ ಎಂದು ರಮೇಶ್ ತಿಳಿಸಿದ್ದಾರೆ.