ಕುಶಾಲನಗರ, ಜು. 22: ನೆಲ್ಲಿಹುದಿಕೇರಿ ಭಾಗದ ನಿವಾಸಿಗಳಿಗೆ ಸೆಸ್ಕಾಂ ಅಧಿಕ ಮೊತ್ತದ ವಿದ್ಯುತ್ ಬಿಲ್ ನೀಡಿರುವ ಹಿನ್ನೆಲೆ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಭಾರತ ಮಾಕ್ರ್ಸ್ವಾದಿ ಕಮ್ಯುನಿಸ್ಟ್ ಪಕ್ಷ ಸ್ಥಳೀಯ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೆಲ್ಲಿಹುದಿಕೇರಿ ಭಾಗದ ಗ್ರಾಹಕರಿಗೆ ಕಳೆದ ಕೆಲವು ತಿಂಗಳಿನಿಂದ ಅಧಿಕ ಮೊತ್ತದ ವಿದ್ಯುತ್ ಬಿಲ್ ಬರುತ್ತಿದೆ. ಕೆಲವರಿಗೆ ರೂ. 8 ರಿಂದ 10 ಸಾವಿರ ಮೊತ್ತದ ತನಕ ಬಿಲ್ ಬಂದಿದ್ದು, ಈ ಬಗ್ಗೆ ವಿದ್ಯುತ್ ನಿಗಮದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಲ್ ಕಲೆಕ್ಟರ್ಗಳ ಪ್ರಮಾದದಿಂದ ಅಧಿಕ ಬಿಲ್ ನಮೂದಾಗುತ್ತಿದೆ. ಕೂಡಲೇ ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿ ವಿದ್ಯುತ್ ಬಿಲ್ ಕಡಿತಗೊಳಿಸಿ ಈ ಭಾಗದ ಜನರ ಸಮಸ್ಯೆ ನಿವಾರಿಸುವಂತೆ ಪಕ್ಷದ ಪ್ರಮುಖರಾದ ಭರತ್ ವಿದ್ಯುತ್ ನಿಗಮದ ಸಹಾಯಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.