ಕೂಡಿಗೆ ಜು 22, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಮತ್ತು ಬ್ಯಾಡಗೊಟ್ಟ ಗ್ರಾಮದ ಅನೇಕ ರೈತರುಗಳ ಜಮೀನಿಗೆ ಕಾಡಾನೆಗಳು ದಾಳಿ ಮಾಡಿ ರೈತರು ಬೆಳೆದ ಕೆಸ, ಕೇನೆ, ಬಾಳೆ, ಜೋಳ, ಶುಂಠಿ ಸೇರಿದಂತೆ ಇತರ ಬೆಳೆಗಳನ್ನು ಮನಬಂದಂತೆ ತಿಂದು ತುಳಿದು ನಷ್ಟಪಡಿಸಿರುವ ಘಟನೆ ನಡೆದಿವೆ.

ಕಳೆದ ಮೂರು ದಿನಗಳಿಂದ ಆನೆಕಾಡಿನಿಂದ ಬಂದಿರುವ ಹತ್ತ್ತಕ್ಕೂ ಹೆಚ್ಚು ಕಾಡಾನೆಗಳು ಬೆಂಡೆಬೆಟ್ಟ ಕಾಡಿನಿಂದ ಸಮೀಪದಲ್ಲಿರುವ ಹಾರಂಗಿ ನದಿಯನ್ನು ದಾಟಿ ಮದಲಾಪುರ, ಬ್ಯಾಡಗೊಟ್ಟ, ಹುದುಗೂರು ಸೀರಹೊಳಲು, ಸೀಗೆಹೊಸೂರು ಗ್ರಾಮಗಳ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ದಾಳಿ ಮಾಡಿ ನಷ್ಟಪಡಿಸಿವೆ. ಇವುಗಳನ್ನು ಸೆರೆ ಹಿಡಿಯಬೇಕೆಂದು ಇಲ್ಲಿನ ಗ್ರಾಮಸ್ಥರು ಸಭೆ ಸೇರಿ ತೀರ್ಮಾನ ಮಾಡಿ ಅರಣ್ಯ ಸಚಿವರಿಗೆ, ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ, ಕ್ಷೇತ್ರದ ಶಾಸಕರಿಗೆ ಮನವಿ ಪತ್ರ ನೀಡಲು ಮುಂದಾಗಿದ್ದಾರೆ.