ಮಡಿಕೇರಿ, ಜು. 22: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಸಂಬಂಧಿತವಾಗಿ ಸರಕಾರದ ಮೂಲಕ ಇತ್ತೀಚೆಗೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯಲ್ಲಿ ಇದೀಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ತಾ. 15 ರಿಂದ ಜುಲೈ 31ರ ವರೆಗೆ ಜಾರಿಯಲ್ಲಿರುವಂತೆ ನಿರ್ಬಂಧಕಾಜ್ಞೆಯನ್ನು ಪ್ರಕಟಿಸಲಾಗಿತ್ತು. ಇದೀಗ ಇದರಲ್ಲಿ ಕೆಲವೊಂದು ಮಾರ್ಪಾಡುಗೊಳಿಸಲಾಗಿದ್ದು, ಹೊಸ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.ಇದರಂತೆ ತಾ. 25ರ ಶನಿವಾರದ ಲಾಕ್‍ಡೌನ್ ಇರುವುದಿಲ್ಲ. ಆದರೆ ತಾ. 26ರ ಭಾನುವಾರದ ಲಾಕ್‍ಡೌನ್ ಹಿಂದಿನ ಆದೇಶದಂತೆ ಮುಂದುವರಿಯಲಿದೆ. ಇದರೊಂದಿಗೆ ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯ ವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ.ಉದ್ಯಾನವನಗಳಲ್ಲಿ ಬೆಳಿಗ್ಗೆ 6 ರಿಂದ 8 ಹಾಗೂ ಸಂಜೆ 5 ರಿಂದ 7 ಗಂಟೆವರೆಗೆ ಮಾತ್ರ ಸ್ಥಳೀಯರ ವಾಯುವಿಹಾರಕ್ಕಾಗಿ ಈ ಹಿಂದೆ ಸಮಯ ನಿಗಧಿಪಡಿಸಲಾಗಿದ್ದು, ಇದು ಮುಂದುವರಿಯಲಿದೆ. ಆದರೆ ಈ ಉದ್ಯಾನವನಗಳಲ್ಲಿ ಕುಳಿತುಕೊಳ್ಳುವ ಬೆಂಚ್‍ಗಳ ಬಳಕೆ ಮಾಡಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ತಾ. 18ರ ಶನಿವಾರ ತಾ. 19ರ ಭಾನುವಾರದೊಂದಿಗೆ ತಾ. 25 ಹಾಗೂ 26 ರಂದೂ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್‍ಗೆ ನಿರ್ದೇಶನ ನೀಡಲಾಗಿತ್ತು. ಇದರಂತೆ ತಾ. 18 ಹಾಗೂ 19 ರಂದು ಜಿಲ್ಲೆಯಾದ್ಯಂತ ಜಿಲ್ಲಾಡಳಿತದ ಸೂಚನೆಯಂತೆ ಯಾವುದೇ ರೀತಿಯ (ತುರ್ತು ಸೇವೆ ಹೊರತಾಗಿ) ಚಟುವಟಿಕೆಗಳು ಇಲ್ಲದಂತೆ ಜಿಲ್ಲೆ ಒಂದು ರೀತಿಯಲ್ಲಿ ಸ್ತಬ್ಧಗೊಂಡಿತ್ತು. ಈ ದಿನಗಳಲ್ಲಿ ಬೆಳಿಗ್ಗೆ 6 ರಿಂದ 9 ಗಂಟೆಯ ತನಕ ಹಾಲು, ದಿನಪತ್ರಿಕೆಗಳ ವಿತರಣೆ, ಪೆಟ್ರೋಲ್ ಬಂಕ್, ಸರಕಾರಿ ನ್ಯಾಯಬೆಲೆ ಅಂಗಡಿ ನಿಗದಿತ ಅವಧಿಯಲ್ಲಿ ತೆಗೆಯುವುದು, ಪೆಟ್ರೋಲ್ ಬಂಕ್, ಕೋವಿಡ್ ಸೇರಿದಂತೆ ಮತ್ತಿತರ ತುರ್ತು ಆರೋಗ್ಯ ಸೇವೆಗೆ ಮಾತ್ರ ಅನುಮತಿ ಇತ್ತು. ಉಳಿದಂತೆ ಎಲ್ಲಾ ರೀತಿಯ ವಾಣಿಜ್ಯೋದ್ಯಮ ಚಟುವಟಿಕೆಗಳು ನಿರ್ಬಂಧಿತವಾಗಿದ್ದು,
ಹೊಸ 16 ಪ್ರಕರಣಗಳು: 81 ಸಕ್ರಿಯ
ತಾ. 22 ರಂದು ಜಿಲ್ಲೆಯಲ್ಲಿ ಹೊಸದಾಗಿ 16 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದುವರೆಗೆ 298 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 212 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 5 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 81 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ ಒಟ್ಟು 115 ನಿಯಂತ್ರಿತ ಪ್ರದೇಶಗಳಿವೆ.
ಹೊಸ ಪ್ರಕರಣಗಳ ವಿವರ
ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಮೂರ್ನಾಡುವಿನ ಮುತ್ತಾರ್ಮುಡಿಯ ಬೈಲೆ ಬಾಣೆ ನಿವಾಸಿ 36 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ರಾಣಿಪೇಟೆಯ ಹೇಮ್‍ರಾಜ್ ಕಾಂಪೌಂಡಿನ ನಿವಾಸಿ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆಯ ವಡ್ಡರಮಾಡು ಗ್ರಾಮದ 40 ವರ್ಷದ ಪುರುಷನಿಗೂ ಸಹ ಕೋವಿಡ್-19 ಸೋಂಕು ದೃಢಪಟ್ಟಿದೆ.
ವೀರಾಜಪೇಟೆಯ ಬೆಕ್ಕೆ ಸೊಡ್ಲೂರುವಿನ ಈ ಹಿಂದೆ ಸೋಂಕು ದೃಢಪಟ್ಟಿದ್ದ ಮೈಸೂರು ಮೂಲದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 44 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ದಾಸವಾಳ ರಸ್ತೆಯ 37 ವರ್ಷದ ಪುರುಷನಿಗೆ ಹಾಗೂ ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ
(ಮೊದಲ ಪುಟದಿಂದ) ಹಿಂದಿನ ಆದೇಶ ಮುಂದುವರಿದಿದ್ದಲ್ಲಿ ತಾ. 25 ಹಾಗೂ 26 ರಂದು ಜಿಲ್ಲೆ ಇದೇ ರೀತಿಯಲ್ಲಿರಬೇಕಾಗಿತ್ತು. ಇದರಲ್ಲಿ ಬದಲಾವಣೆ ಮಾಡಲಾಗಿದ್ದು, ತಾ. 26ರ ಭಾನುವಾರ ಲಾಕ್‍ಡೌನ್ ಜಾರಿಯಲ್ಲಿರಲಿದೆ.
ಇದರೊಂದಿಗೆ ಸಂಜೆ 6 ರಿಂದಲೇ ಮರುದಿನ ಬೆಳಿಗ್ಗೆ 6ರ ತನಕ ರಾತ್ರಿ ಕಫ್ರ್ಯೂಗೆ ಸೂಚನೆ ನೀಡಲಾಗಿತ್ತು. ಇದೀಗ ಹೊಸ ಆದೇಶದಂತೆ ಈ ಆದೇಶದಲ್ಲಿ ತುಸು ಸಡಿಲಿಕೆ ಮಾಡಲಾಗಿದ್ದು, ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 5ರ ತನಕ ರಾತ್ರಿ ಕಫ್ರ್ಯೂ ಜಾರಿಯಲ್ಲಿರಲಿದೆ.
ಹೊಸ 16 ಪ್ರಕರಣಗಳು: 81 ಸಕ್ರಿಯ
(ಮೊದಲ ಪುಟದಿಂದ) 32 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ತಲ್ತರೆ ಶೆಟ್ಟಳ್ಳಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 47 ವರ್ಷದ ಪುರುಷ, 46 ವರ್ಷದ ಮಹಿಳೆ, 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಜಯನಗರ 1ನೇ ಬ್ಲಾಕಿನ 55 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ವೀರಾಜಪೇಟೆಯ ಹೆಗ್ಗಳದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 42 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ.
ಕುಶಾಲನಗರದ ಕಣಿವೆ ಪೋಸ್ಟ್‍ನ ಹುಲುಸೆಯ 54 ವರ್ಷದ ಮಹಿಳೆ, ಗೋಣಿಕೊಪ್ಪದ 23 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ.
ಹೊಸ ನಿಯಂತ್ರಿತ ವಲಯಗಳು
ಜಿಲ್ಲೆಯಲ್ಲಿ ಹೊಸದಾಗಿ 8 ಕಂಟೈನ್‍ಮೆಂಟ್ ಜೋನ್‍ಗಳನ್ನು ತೆರೆಯಲಾಗಿದೆ. ಬೈಲೆ ಬಾಣೆ ಮುತ್ತಾರ್‍ಮುಡಿ, ರಾಣಿಪೇಟೆ ಮಡಿಕೇರಿ, ವಡ್ಡರಮಾಡು ಗ್ರಾಮ, ಬೆಕ್ಕೆಸೊಡ್ಲೂರು ದಾಸವಾಳ ರಸ್ತೆ ಮಡಿಕೇರಿ, 1ನೇ ಬ್ಲಾಕ್, ಜಯನಗರ, ಹುಲುಸೆ, ಕಾವೇರಿ ಕಾಂಪ್ಲೆಕ್ಸ್, 2 ನೇ ಮಹಡಿ, ಸರ್ಕಾರಿ ಆಸ್ಪತ್ರೆ, ಗೋಣಿಕೊಪ್ಪ, ವೀರಾಜಪೇಟೆಯ ಪೆರುಂಬಾಡಿಯ ನಿಯಂತ್ರಿತ ಪ್ರದೇಶವನ್ನು ತೆರೆದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.