ಸಿದ್ದಾಪುರ, ಜು. 22: ದುಲ್ ಹಜ್ಜ್ ತಿಂಗಳ ಚಂದ್ರ ದರ್ಶನ ಪ್ರತ್ಯಕ್ಷವಾಗಿರುವುದರಿಂದ ಕೊಡಗಿನಲ್ಲಿ ಜುಲೈ 31 ಶುಕ್ರವಾರ ತ್ಯಾಗ ಬಲಿದಾನದ, ಆತ್ಮಸಮರ್ಪಣೆಯ ಸಂದೇಶ ಸಾರುವ ಈದುಲ್ ಅಝ್ ಹಾ (ಬಕ್ರಿದ್) ಆಚರಿಸಲಾಗುವುದೆಂದು ಸಮಸ್ತ ಕೊಡಗು ಜಿಲ್ಲಾ ಉಪ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆದ ಶೈಖುನಾ ಎಂ.ಎಂ. ಅಬ್ದುಲ್ಲ ಫೈಝಿ ಘೋಷಿಸಿದ್ದಾರೆ ಎಂದು ಕೊಡಗು ಜಿಲ್ಲಾ ಜಂಯಿಯ್ಯತುಲ್ ಉಲಮಾ ಸದಸ್ಯ ಉಮ್ಮರ್ ಫೈಝಿ ತಿಳಿಸಿದ್ದಾರೆ.