ಶನಿವಾರಸಂತೆ, ಜು. 22: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಸವಿರುವ 32 ವರ್ಷದ ಮಹಿಳೆಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಇಂದು ಕೂಡಿಗೆಯ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲಾಯಿತು. ಸೋಂಕಿತೆಯ ಪತಿಯು ಸಹ ಕೊರೊನಾ ಸೋಂಕಿತರಾಗಿದ್ದು, ಪತಿ - ಪತ್ನಿಯರಿಬ್ಬರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಸೋಂಕಿತರ ಮನೆಯ ಸುತ್ತಮುತ್ತ ಸಾರ್ವಜನಿಕ ರಸ್ತೆಗೆ ಔಷಧ ಸಿಂಪಡಿಸಲಾಯಿತು. ಸೋಂಕಿತರ ಮನೆಯ ಸುತ್ತ ನಿರ್ಬಂಧಿತ ಪ್ರದೇಶ ಎಂದು ಸೀಲ್‍ಡೌನ್ ಮಾಡಲಾಯಿತು.
ಉಪ ತಹಶೀಲ್ದಾರ್ ಗೋವಿಂದರಾಜ್, ಶನಿವಾರಸಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಆರೋಗ್ಯ ಇಲಾಖೆಯ ಸರಸ್ವತಿ, ಪೊಲೀಸ್ ಇಲಾಖೆಯ ಚನ್ನಕೇಶವ, ಗ್ರಾಮ ಸಹಾಯಕ ಹೂವಯ್ಯ ಹಾಜರಿದ್ದರು.