ಮಡಿಕೇರಿ, ಜು. 22: ಕೋವಿಡ್19 ರ ಸಂಬಂಧ ಆಂಟಿಜೆನ್ ಪರೀಕ್ಷಾ ಕಿಟ್ ಗಳ ಮೂಲಕ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ಶೀಘ್ರವಾಗಿ ನೀಡುವ ಉದ್ದೇಶದಿಂದ ಸರ್ಕಾರವು ವಿಜ್ಞಾನ ಪದವೀಧರ (ಬಿ.ಎಸ್ಸಿ)/ ಮೆಡಿಕಲ್ / ಡೆಂಟಲ್/ ಪ್ಯಾರಾ ಮೆಡಿಕಲ್ ಪದವೀಧರರಿಗೆ ಸೂಕ್ತ ತರಬೇತಿಯನ್ನು ನೀಡುವ ಮೂಲಕ ಆಯಾ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದೆ.

ಈ ಸಂಬಂಧ ತಾ. 23ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಕರ್ನಾಟಕ ರಾಜ್ಯದ ಪ್ರಯೋಗಾಲಯಗಳ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ನಿಮ್ಹಾನ್ಸ್ ನ ವೈರಾಲಜಿ ವಿಭಾಗದ ಮುಖ್ಯಸ್ಥ ಪೆÇ್ರ. ರವಿ.ವಿ ಇವರು ಯೂಟ್ಯೂಬ್ hಣಣಠಿs://ತಿತಿತಿ.ಥಿouಣube.ಛಿom/ಛಿhಚಿಟಿಟಿeಟ/Uಅ-ರಿಎ_ಓಓತಿಃ9m8_ಔoಛಿಉo1Zಜಿಛಿg ಲಿಂಕ್ ಮೂಲಕ ಆನ್ ಲೈನ್ ತರಬೇತಿ ನೀಡಲಿದ್ದಾರೆ.

ಆಸಕ್ತರು ಮತ್ತು ಸ್ವಯಂ ಸೇವಕರಾಗಿ ಈ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವ 30 ವರ್ಷ ವಯಸ್ಸಿನೊಳಗಿರುವ ಮೇಲೆ ಸೂಚಿಸಿದ ವಿದ್ಯಾರ್ಹತೆ ಹೊಂದಿರುವವರು ತರಬೇತಿಯನ್ನು ವೀಕ್ಷಿಸಿ, ನಂತರ ಆಯಾ ತಾಲೂಕುಗಳಲ್ಲಿ ಈ ಕೆಳಕಂಡವರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಮಡಿಕೇರಿ ತಾಲೂಕು : ಗುರು, (8970916190)

ಸೋಮವಾರಪೇಟೆ ತಾಲೂಕು: ಮಹೇಶ್, 9902322153

ವಿರಾಜಪೇಟೆ ತಾಲೂಕು: ಅರುಣ್, 8277510333 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.