ಸೋಮವಾರಪೇಟೆ, ಜು. 22: ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಮನವಿ ಮೇರೆಗೆ ಕರ್ನಾಟಕ ಜಾನಪದ ಪರಿಷತ್‍ನಿಂದ ಬಿಡುಗಡೆಯಾದ ಸಹಾಯಧನವನ್ನು ತಾಲೂಕಿನ 25 ಮಂದಿ ಕಲಾವಿದರಿಗೆ ವಿತರಿಸಲಾಯಿತು.
ಇಲ್ಲಿನ ಪತ್ರಿಕಾಭವನದಲ್ಲಿ ತಾಲೂಕಿನ ಕೂಡಿಗೆ, ಕುಶಾಲನಗರ, ಹೆಬ್ಬಾಲೆ, ಬೆಟ್ಟದಳ್ಳಿ, ತಲ್ತರೆಶೆಟ್ಟಳ್ಳಿ, ಗೆಜ್ಜೆಹಣಕೋಡು, ಹಾನಗಲ್ಲು, ಚೌಡ್ಲು, ಕೊಡ್ಲಿಪೇಟೆ ಸೇರಿದಂತೆ ಪಟ್ಟಣ ವ್ಯಾಪ್ತಿಯ ಒಟ್ಟು 25 ಮಂದಿ ಕಲಾವಿದರಿಗೆ ಸಹಾಯಧನ ವಿತರಿಸಲಾಯಿತು. Àರಿಷತ್‍ನ ಹೋಬಳಿ ಉಪಾಧ್ಯಕ್ಷ ನ.ಲ. ವಿಜಯ, ಕಾರ್ಯದರ್ಶಿ ಎಂ.ಎ. ರುಬೀನಾ, ನಿರ್ದೇಶಕ ಕೆ.ಎ. ಪ್ರಕಾಶ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.