*ಗೋಣಿಕೊಪ್ಪಲು, ಜು. 22: ಬಲ್ಯಮುಂಡೂರು ಗ್ರಾ.ಪಂ. ವ್ಯಾಪ್ತಿಯ ಕೋಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಲ್ಲಿನ ಸಭಾಂಗಣದಲ್ಲಿ ಐವರು ಆಶಾ ಕಾರ್ಯಕರ್ತರಿಗೆ ಸನ್ಮಾನಿಸಿ, ತಲಾ ರೂ.3000 ನಗದು ನೀಡಿ ಗೌರವಿಸಲಾಯಿತು. ಕೊರೊನಾ ಮಹಾಮಾರಿ ಸಂದರ್ಭ ಬಲ್ಯಮುಂಡೂರು ವ್ಯಾಪ್ತಿ ಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆ ಸಂಘದ ಪ್ರಭಾರ ಅಧ್ಯಕ್ಷ ತಾಣಚ್ಚಿರ ದೀಪಕ್ ಹಾಗೂ ಸಿಇಓ ಎಂ.ಮೊಣ್ಣಪ್ಪ ಮತ್ತು ನಿರ್ದೇಶಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.