ಮುಳ್ಳೂರು, ಜು. 21: ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಸಮೀಪದ ಗುಡುಗಳಲೆ ಜಂಕ್ಷನ್ ಭಾಗವೊಂದನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದ್ದು, ಶನಿವಾರಸಂತೆ ಪತ್ರಿಕಾ ಭವನದ ಅಧ್ಯಕ್ಷ ಎಚ್.ಆರ್. ಹರೀಶ್‍ಕುಮಾರ್ ಈ ಪ್ರದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವ ಬಡ ಕುಟುಂಬಗಳನ್ನು ಗುರುತಿಸಿ ಬಳಿಕ ಪತ್ರಿಕಾ ಭವನದ ವತಿಯಿಂದ ಉಚಿತವಾಗಿ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಕಿಟ್‍ಗಳನ್ನು ವಿತರಿಸಲಾಯಿತು.