ಗುಡ್ಡೆಹೊಸೂರು ತೆಪ್ಪದ ಕಂಡಿ ನಿವಾಸಿ ವೈ ಪುಟ್ಟರಾಜು (59) ತಾ. 21 ರಂದು ಹೃದಯಾಘಾತದಿಂದ ನಿಧನರಾದರು. ಅಂತ್ಯಕ್ರಿಯೆ ತಾ. 22 ರಂದು (ಇಂದು) ಕುಶಾಲನಗರ ಸಮೀಪದ ಆವರ್ತಿ ಗ್ರಾಮದಲ್ಲಿ ನಡೆಯಲಿದೆ. ಮೃತರು ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಪತ್ನಿಯನ್ನು ಆಗಲಿದ್ದಾರೆ. ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ, ಪುಟ್ಟರಾಜು ಅವರ ನಿಧನಕ್ಕೆ ಜಿಲ್ಲಾ ಸವಿತಾ ಸಮಾಜ ಮತ್ತು ಗುಡ್ಡೆಹೊಸೂರಿನ ವರ್ತಕರು ಸಂತಾಪ ಸೂಚಿಸಿದ್ದಾರೆ.