ಮಡಿಕೇರಿ, ಜು. 20: ನಾಪೆÇೀಕ್ಲು-ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಅಮೃತಾ 581 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅಫ್ರೀನಾ ಬಿ.ಜಿ. 547 ಅಂಕ, ಅಫ್ಸಿಯಾ ಟಿ.ಎಂ. 515 ಅಂಕಗಳೊಂದಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೈಮಾ ಕೆ.ಎಂ. 538 ಅಂಕಗಳಿಸಿ ಪ್ರಥಮ ಹಾಗೂ ಕಲಾ ವಿಭಾಗದಲ್ಲಿ ಅಸ್ಮಾ ಸಿ.ಜೆ. 506 ಅಂಕಗಳೊಂದಿಗೆ ಪ್ರಥಮ ಸ್ಥಾನಗಳಿಸಿದ್ದಾರೆ.
ಒಟ್ಟು 40 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿಗೆ ಶೇ. 83 ರಷ್ಟು ಫಲಿತಾಂಶ ಬಂದಿದೆ.
ಗರಗಂದೂರು: ಸೋಮವಾರಪೇಟೆ ತಾಲೂಕಿನ ಗರಗಂದೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜು ಶೇ. 100 ಫಲಿತಾಂಶ ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಕಾಲೇಜಿಗೆ ಪ್ರಥಮ ಸ್ಥಾನವನ್ನು 544 ಅಂಕಗಳೊಂದಿಗೆ ಶೇ. 90.66 ಫಲಿತಾಂಶ ಪಡೆಯುವ ಮೂಲಕ ಚಂದನ ಸಿ.ಪಿ. ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು 542 ಅಂಗಗಳೊಂದಿಗೆ ಶೇ. 90.33 ಫಲಿತಾಂಶ ಪಡೆಯುವ ಮೂಲಕ ಅಪೂರ್ವ ಎ.ಇ., ತೃತೀಯ ಸ್ಥಾನವನ್ನು ಯಶ್ವಂತ್ ಹೆಚ್.ಎಲ್. ಅವರು 540 ಅಂಗಗಳಿಸಿ ಶೇ. 90 ಫಲಿತಾಂಶ ಪಡೆದಿದ್ದಾರೆ.
ಚೆಟ್ಟಳ್ಳಿ: ನೆಲ್ಲಿಹುದಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ. 91 ರಷ್ಟು ಫಲಿತಾಂಶ ದೊರೆತಿದೆ. ಕಾಲೇಜಿನಿಂದ ಒಟ್ಟು 53 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.91 ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 7 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 58 ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ರೇಷ್ಮ ಎಸ್. 501 ಅಂಕಗಳಿಸಿ ಶೇ. 83.5 ರಷ್ಟು ಫಲಿತಾಂಶ ಪಡೆದು ಕಲಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ವಾಣಿಜ್ಯ ವಿಭಾಗದಲ್ಲಿ ಪೂಜಾ ಎಂ. 532 ಅಂಕಗಳೊಂದಿಗೆ ಶೇ. 88.7 ರಷ್ಟು ಫಲಿತಾಂಶ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ 465 ಅಂಕಗಳೊಂದಿಗೆ ಶೇ. 77.5 ರಷ್ಟು ಫಲಿತಾಂಶ ಪಡೆದು ಶಮ್ನ ಕೆ.ಹೆಚ್. ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.