ಸುಂಟಿಕೊಪ್ಪ, ಜು.20: ಭಾರತ ದೇಶದ ತ್ರಿವರ್ಣ ಧ್ವಜದ ಚಿಹ್ನೆ ಇರುವ ಮುಖಗವಸು ಧರಿಸಿಕೊಂಡು ಓಡಾಡುತ್ತಿರುವ ವ್ಯಕ್ತಿಯೋರ್ವನ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ಸೋಮವಾರ ಲಾಕ್‍ಡೌನ್ ತೆರವಿನ ನಂತರ ಪಟ್ಟಣದಲ್ಲಿ ಅಸ್ಸಾಂ ಮೂಲದ ವ್ಯಕ್ತಿಯೋರ್ವ ತ್ರಿವರ್ಣ ಧ್ವಜ ಇರುವ ಮಾಸ್ಕ್ ಮುಖಗವಸು ಧರಿಸಿಕೊಂಡು ಓಡಾಡುತ್ತಿದ್ದು, ಆತನನ್ನು ವಿಚಾರಿಸಿದಾಗ ಈ ಮಾಸ್ಕ್ ಅನ್ನು ಕನ್ನಡ ವೃತ್ತ ಬಳಿಯಿರುವ ಬಟ್ಟೆ ಅಂಗಡಿಯಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. ಭಾರತ ದೇಶದ ತ್ರಿವರ್ಣ ಧ್ವಜಕ್ಕೆ ಅಪಮಾನ ಎಸಗಿದ ಈ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ವಿಶ್ವಹಿಂದೂ ಪರಿಷದ್ ಸುಂಟಿಕೊಪ್ಪ ಘಟಕದ ಉಪಾಧ್ಯಕ್ಷ ಕೆ.ಕೆ.ವಾಸುದೇವ ಸುಂಟಿಕೊಪ್ಪ ಠಾಣೆಗೆ ಹಾಗೂ ಗ್ರಾ.ಪಂ.ಪಿಡಿಓ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಅಸ್ಸಾಂ ಮೂಲದ ಈ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಮಾಸ್ಕ್ ಮಾರಾಟ ಮಾಡಿದ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.