ಕೂಡಿಗೆ, ಜು. 20: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಈ ಬಾರಿ ಸುಣ್ಣ ಬಣ್ಣ ಮತ್ತು ಅಲಂಕಾರ ದೀಪಗಳ ದುರಸ್ತಿ ಭಾಗ್ಯ ಲಭಿಸಿದೆ. ಕಳೆದ ಐದು ವಷರ್Àಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ಬಿಡುಗಡೆಯಾಗದೆ ಯಾವದೇ ಕೆಲಸಗಳು ನಡೆದಿರಲಿಲ್ಲ. ಇದೀಗ ನಿಗಮದ ವತಿಯಿಂದ ಹಣ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ದುರಸ್ತಿ ಮತ್ತು ವಿದ್ಯುತ್ ದೀಪಗಳ ದುರಸ್ತಿ ಸೇರಿದಂತೆ ಸುಣ್ಣ ಬಣ್ಣ ಹೊಡೆಯುವ ಕಾರ್ಯ ಕೈಗೊಳ್ಳಲಾಗಿದೆ.
ಅಣೆಕಟ್ಟೆಯ ದುರಸ್ತಿ ಬೃಂದಾವನವಕ್ಕೆ ಅಳವಡಿಕೆ ಮಾಡಿರುವ ಅಲಂಕಾರಿಕ ಬೃಹತ್ ದೀಪಗಳಿಗೆ ವಿದ್ಯುತ್ ಸಂಪರ್ಕ, ಅಣೆಕಟ್ಟೆಯ ಮುಂಭಾಗದ ಎರಡು ದ್ವಾರಗಳಿಗೆ ಬಣ್ಣ ಬಳಿದು ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚನೆ ಮೇರೆಗೆ ಅಣೆಕಟ್ಟೆಯ ಎಡ ಭಾಗದಲ್ಲಿರುವ ಬೃಂದಾವನವನ್ನು ಅಭಿವೃದ್ಧಿ ಪಡಿಸುವ ಆ ಭಾಗದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಕೂಡ ನೀರಾವರಿ ಇಲಾಖೆ ಅಧಿಕಾರಿಗಳು ಸನ್ನದ್ದರಾಗಿದ್ದಾರೆ.