ಕೂಡಿಗೆ, ಜು. 20: ಕೂಡಿಗೆ ಗ್ರಾಮ ಪಂಚಾಯಿತಿಯ ಬ್ಯಾಡಗೊಟ್ಟ ಗ್ರಾಮದ ಯುವಕ ಸಂಘದ ವತಿಯಿಂದ ಬ್ಯಾಡಗೊಟ್ಟ ಮತ್ತು ಅದರ ಸಮೀಪದ ಉಪರಸ್ತೆಯ ಡಾಂಬರೀಕರಣ ಕಾಮಗಾರಿ ನಡೆದು ರಸ್ತೆಯ ಸಮೀಪದಲ್ಲಿ ನೆಡಲಾಗಿದ್ದ ಎಲ್ಲಾ ಗಿಡಗಳು ಹಾಳಾಗಿದ್ದವು. ಇದನ್ನು ಅರಿತ ಸ್ಥಳೀಯ ಯುವಕರು ಮತ್ತು ಗ್ರಾಮಸ್ಥರು ಸೇರಿ ವಿವಿಧ ಕಾಡು ಜಾತಿಯ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಈ ಸಂದರ್ಭ ಜಿಲ್ಲಾ ಜೆ.ಡಿ.ಎಸ್.ನ ಎಸ್.ಸಿ. ಘಟಕದ ಅಧ್ಯಕ್ಷ ಬಿ.ಡಿ. ಅಣ್ಣಯ್ಯ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಗ್ರಾಮದ ಮುಖ್ಯಸ್ಥರು ಹಾಜರಿದ್ದರು.